ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

ಹೊಸದಿಗಂತ ವರದಿ, ಮಡಿಕೇರಿ:

ತಲಕಾವೇರಿಯ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಈ ಬಾರಿ ಅಕ್ಟೋಬರ್ 17ರ ರಾತ್ರಿ 7.21ಗಂಟೆಗೆ ಪವಿತ್ರ ತೀರ್ಥೋದ್ಭವವಾಗಲಿದೆ.
ದಕ್ಷಿಣದ ಗಂಗೆ ಎಂದೇ ಕರೆಯಲಾಗುವ ಕಾವೇರಿಯು ಪ್ರತೀವರ್ಷ ಅಕ್ಟೋಬರ್ 17ರ ತುಲಾ ಸಂಕ್ರಮಣದಂದು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದು, ಅದರಂತೆ ಈ ಬಾರಿ 17ರ ಸಂಜೆ 7.21ರ ಮೇಷ ಲಗ್ನದಲ್ಲಿ ತೀರ್ಥೋದ್ಭವ ನಡೆಯಲಿದೆ.
ಸೆ.27 ರಂದು ಬೆಳಗ್ಗೆ 11.05 ನಿಮಿಷಕ್ಕೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಈ ಬಾರಿಯ ತಲಕಾವೇರಿ ಜಾತ್ರೆ ಆರಂಭವಾಗಲಿದೆ. ಅ. 5 ರಂದು ಬೆಳಗ್ಗೆ 9.35 ಗಂಟೆಹೆ ಅಜ್ಞಾಮೂಹೂರ್ತ, ಅ.15 ರಂದು ಪೂವಾಹ್ನ 11.45 ಗಂಟೆಗೆ ಅಕ್ಷಯ ಪಾತ್ರೆ ಇರಿಸುವ ವಿಧಿವಿಧಾನಗಳು ಜರುಗಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!