ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದ ಪ್ರಸಿದ್ಧ ಉದ್ಯಮಿಮುಕೇಶ್ ಅಂಬಾನಿ ಮುಂಬೈ ನಿವಾಸದ ಎದುರು ಅನುಮಾನಾಸ್ಪದ ಕಾರು ಮತ್ತೆಯಾಗಿದ್ದು, ಇದರಲ್ಲಿ ಸುಮಾರು 20 ಜಿಲೆಟಿನ್ ಸ್ಫೋಟಕ ಕಡ್ಡಿಗಳು ಪತ್ತೆಯಾಗಿವೆ.
ಮುಂಬೈನ ಪೆಡ್ಡಾರ್ ರಸ್ತೆಯಲ್ಲಿರುವ ಆಂಟಿಲಿಯಾ ನಿವಾಸದ ಬಳಿ ಸ್ಕಾರ್ಪಿಯೋ ಗಾಡಿ ಒಂದು ಸಾಕಷ್ಟು ಸಮಯದಿಂದ ನಿಂತಿದ್ದನ್ನು ಅಂಬಾನಿಯವರ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ತಕ್ಷಣ ಆ ಮಾಹಿತಿಯನ್ನು ಮುಂಬೈ ಪೊಲೀಸರಿಗೆ ಕೊಡಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಪ್ರಕರಣದ ಕುರಿತಂತೆ ಪೊಲೀಸ್ ಕಮಿಷನರ್ರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಅಲ್ಲದೇ ಅಗತ್ಯಬಿದ್ದರೆ ಅಂಬಾನಿ ಕುಟುಂಬಕ್ಕೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ತಿಳಿಸಿದೆ