ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೃಣಮೂಲ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದ ಬಂಗಾಳದ ರಾಜಕಾರಣಿ ಮುಕುಲ್ ರಾಯ್ ಅವರು ಮತ್ತೆ ತೃಣಮೂಲ ಕಾಂಗ್ರೆಸ್ಗೆ ಮರಳಿದ್ದಾರೆ .
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಟಿಎಂಸಿ ಭವನದಲ್ಲಿ ರಾಯ್ ಅವರು ಟಿಎಂಸಿಗೆ ಸೇರ್ಪಡೆ ಆಗಿದ್ದಾರೆ. ಇದಕ್ಕಿಂತ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ರಾಯ್ ಮಾತುಕತೆ ನಡೆಸಿದ್ದಾರೆ. ಈಹೊತ್ತಲ್ಲಿ ಪಾರ್ಥ ಚಟರ್ಜಿ ಕೂಡಾ ಭಾಗಿಯಾಗಿದ್ದರು.
ಮುಕುಲ್ ರಾಯ್ ಅವರ ಮರಳುವಿಕೆಯು ಬಂಗಾಳ ರಾಜಕೀಯ ವಲಯದಲ್ಲಿ ವಾರಗಳೀಂದೀಚೆಗೆ ಚರ್ಚಾ ವಿಷಯ ಆಗಿತ್ತು. ಕೊಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಬಿಜೆಪಿ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಮತ್ತು ಅವರ ಪುತ್ರ ಶುಭ್ರಂಶು ರಾಯ್ ಟಿಎಂಸಿಗೆ ಮರುಸೇರ್ಪಡೆ ಆಗಿದ್ದಾರೆ.