Sunday, August 14, 2022

Latest Posts

ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಮುಲ್ಲಾ ಮೊಹಮದ್ ಹಸನ್ ಅಖುಂದ್ ನಾಯಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಮುಲ್ಲಾ ಮೊಹಮದ್ ಹಸನ್ ಅಖುಂದ್ ನಾಯಕರಾಗಲಿದ್ದಾರೆ ಎಂದು ತಾಲಿಬಾನ್ ಘೋಷಿಸಿದೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲಿಬಾನ್ ಮುಖ್ಯ ವಕ್ತಾರ ಜಬಿಯುಲ್ಲಾ ಮುಜಾಹಿದ್, ಮೊಹಮದ್ ಹಸಾನ್ ನಮ್ಮ ನಾಯಕರಾಗಿರಲಿದ್ದಾರೆ. ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದರ್ ಸರ್ಕಾರದ ಉಪ ನಾಯಕರಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ.
ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕುಬ್‌ರನ್ನು ರಕ್ಷಣಾ ಸಚಿವರನ್ನಾಗಿ ಘೋಷಿಸಲಾಗಿದೆ. ಹಖ್ಬಾನಿ ಗುಂಪಿನ ನಾಯಕ ಸಿರಾಜುದ್ದೀನ್ ಹಖ್ಬಾನಿಯನ್ನು ಆಂತರಿಕ ಸಚಿವನನ್ನಾಗಿ ನೇಮಕ ಮಾಡಲಾಗಿದೆ. ಸಚಿವ ಸಂಪುಟ ಇನ್ನು ಮುಗಿದಿಲ್ಲ, ಇದೀಗ ಘೋಷಿಸಿರುವುದು ಹಂಗಾಮಿ ಸಂಪುಟವಷ್ಟೆ ಎಂದು ಮುಜಾಹಿದ್ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ, ದೇಶದ ಇತರ ಪ್ರದೇಶಗಳಲ್ಲಿರುವವರನ್ನು ಒಳಗೊಂಡ ಸರ್ಕಾರ ರಚಿಸಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss