ಜನರಲ್ಲಿ ದಯವಿಟ್ಟು ಪ್ರಾರ್ಥಿಸಿ ಎಂದ ಬಹುಭಾಷಾ ನಟಿ ಖುಷ್​ಬೂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಖುಷ್​ಬೂ ಜನರಲ್ಲಿ ಹರಸಿ, ಪ್ರಾರ್ಥಿಸಿ ಎಂದೂ ಕೇಳಿಕೊಂಡಿದ್ದಾರೆ.
ಅಂದಹಾಗೆ ಅವರು ಜನರಲ್ಲಿ ಮಾಡಿಕೊಂಡಿರುವ ವಿನಂತಿ ಅವರಿಗಾಗಿ ಅಲ್ಲ, ಬದಲಿಗಾಗಿ ಅವರ ಹಿರಿಯಣ್ಣನಿಗಾಗಿ. ತನ್ನ ದೊಡ್ಡ ಅಣ್ಣ ತೀವ್ರ ಅನಾರೋಗ್ಯದಲ್ಲಿ ಇರುವುದಾಗಿ ಹೇಳಿಕೊಂಡಿರುವ ಖುಷ್​​ಬೂ ಅವರ ಆರೋಗ್ಯದ ಸಲುವಾಗಿ ತಾವೂ ಪ್ರಾರ್ಥಿಸಿಕೊಳ್ಳಿ ಎಂಬುದಾಗಿ ಅಭಿಮಾನಿಗಳಲ್ಲಿ, ಸಿನಿಪ್ರಿಯರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ವೈಯಕ್ತಿಕವಾಗಿ ಸಂಕಷ್ಟದಲ್ಲಿದ್ದೇನೆ. ನನ್ನ ಹಿರಿಯ ಅಣ್ಣ ಜೀವನ್ಮರಣ ಹೋರಾಟದಲ್ಲಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವತ್ತು ಸ್ವಲ್ಪ ಚೇತರಿಕೆ ಕಂಡುಬಂದಿದೆ. ಆತನಿಗಾಗಿ ದಯವಿಟ್ಟು ನೀವೆಲ್ಲರೂ ಪ್ರಾರ್ಥಿಸಿ, ಆತನಿಗೆ ಅದು ಅಗತ್ಯವಿದೆ ಎಂದು ವಿನಂತಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!