ಹೊಸದಿಗಂತ ಆನ್ ಲೈನ್ ಡೆಸ್ಕ್:
ಜಗತ್ತಿನ ಪ್ರಮುಖ ಸ್ಟಾರ್ಟ್ ಅಪ್ ಹಬ್ ಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನ ದೊರಕಿದೆ.
ಜಗತ್ತಿನ ಟಾಪ್ 100 ಸ್ಟಾರ್ಟ್ ಅಪ್ ಹಬ್ ಗಳಲ್ಲಿ ಭಾರತದ ಮುಂಬೈ ಮೊದಲ ಸ್ಥಾನದಲ್ಲಿದ್ದು, ಲಂಡನ್ ಎರಡನೇ ಸ್ಥಾನ ಪಡೆದಿದೆ.
ಜೊತೆಗೆ ಟಾಪ್ 30 ಟೆಕ್ ಹಬ್ ಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ 23ನೇ ಸ್ಥಾನ ಸಿಕ್ಕಿದ್ದು, ಟಾಪ್ 40 ಪಟ್ಟಿಯಲ್ಲಿ ದೆಹಲಿ 36ನೇ ಸ್ಥಾನ ಪಡೆದುಕೊಂಡಿದೆ.
ಗ್ಲೋಬಲ್ ಸ್ಟಾರ್ಟ್ ಅಪ್ ರ್ಯಾಂಕಿಂಗ್ ಸಂಸ್ಥೆ ನೀಡಿದ ಕಾರ್ಯಕ್ಷಮತೆ, ಪ್ರತಿಭೆ, ಸಂಪರ್ಕ ಸಾಧನೆ ಸೇರಿದಂತೆ 7 ಮಾನದಂಡಗಳನ್ನು ಪೂರ್ಣಗೊಳಿಸುವ ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಭಾರತದ ಸ್ಟಾರ್ಟ್ ಅಪ್ ಗಳು ಈ ವರ್ಷದ ಮೊದಲ 6 ತಿಂಗಳಿನಲ್ಲಿ 12.1 ಶತಕೋಟಿ ಡಾಲರ್ ಗಳಿಸುವ ಮೂಲಕ ವಿಶ್ವಮಟ್ಟದ ಟೆಕ್ ಹಬ್ ನಲ್ಲಿ ಒಂದಾಗಿದೆ. ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳು ಜಗತ್ತಿನಲ್ಲೇ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ಗಳಾಗಿ ರೂಪುಗೊಂಡಿದೆ.