ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಗಣೇಶ ವಿಸರ್ಜನೆ ವೇಳೆ ಮುಂಬೈನ ವರ್ಸೋವ ಜೆಟ್ಟಿಯ ಅರಬ್ಬಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ನಿನ್ನೆ ಪಾಟೀಲ್ ಅವರ ಜತೆ ಇತರ ಇಬ್ಬರು ಯುವಕರೂ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದರು. ಇವರಲ್ಲಿ ಇಬ್ಬರ ಮೃತದೇಹ ಮಾತ್ರ ಪತ್ತೆಯಾಗಿತ್ತು. ಇದೀಗ ಮತ್ತೊಬ್ಬರ ಮೃತದೇಹವೂ ಪತ್ತೆ ಮಾಡಲಾಗಿದೆ.
ಗಣೇಶ ವಿಗ್ರಹ ವಿಸರ್ಜನೆಗಾಗಿ ಒಟ್ಟು ಐವರು ಯುವಕರು ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದರೆ, ಮೂವರು ನೀರಿನಲ್ಲಿ ಕೊಚ್ಚಿ ಕೊಚ್ಚಿಹೋಗಿದ್ದರು.