ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 167 ರನ್ ಗಳಿಸಿದೆ. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಎಲ್ಲಿಸ್ ಪೆರ್ರಿ 81 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಎಲ್ಲಿಸ್ ಪೆರ್ರಿ ಒಂದು ಭದ್ರವಾಗಿ ಬೇರೂರಿ ಸ್ಕೋರ್ ಏರಿಸಲಾರಂಭಿಸಿದರು. ಈ ವೇಳೆ 6ನೇ ಕ್ರಮಾಂಕದಲ್ಲಿ ಬಂದ ರಿಚಾ ಘೋಷ್, ಪೆರ್ರಿ ಜೊತೆ ಅರ್ಧಶತಕದ ಜೊತೆಯಾಟವನ್ನಾಡಿದರು.
ತಂಡದಲ್ಲಿ ಸತತ ವಿಕೆಟ್ ಪತನದ ನಡುವೆಯೂ ಎಂದಿನಂತೆ ತಮ್ಮ ಆಟವನ್ನು ಮುಂದುವರೆಸಿದ ಪೆರ್ರಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪೆರ್ರಿ ಆರ್ಭಟಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಇವತ್ತು ಮ್ಯಾಚ್ ನಾವೇ ಗೆಲ್ತಿವಿ ಅನ್ನೋ ಭರವಸೆಯಲ್ಲಿದ್ದಾರೆ.