ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೈದರಾಬಾದ್​ ಗೆಲುವಿಗೆ ಸಾಧಾರಣ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್​

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸನ್​ರೈಸರ್ಸ್​ ಹೈದರಾಬಾದ್​ ಬೌಲಿಂಗ್ ದಾಳಿಗೆ ಮಂಕಾದ ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 150 ರನ್​ಗಳಿಸಿದೆ.
ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ರೋಹಿತ್ ಶರ್ಮಾ ಮತ್ತು ಡಿಕಾಕ್​ 55 ರನ್​ಗಳ ಜೊತೆಯಾಟ ನೀಡಿದರು. ಆದರೆ, ರೋಹಿತ್ 25 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 32 ರನ್​ಗಳಿಸಿ ವಿಜಯ್ ಶಂಕರ್​ಗೆ ವಿಕೆಟ್​ ಒಪ್ಪಿಸಿದರು.
ನಂತರ ಬಂದ ಸೂರ್ಯಕುಮಾರ್ ಯಾದವ್​ ಕೇವಲ 10 ರನ್​ಗಳಿಸಿ ಶಂಕರ್​ಗೆ 2ನೇ ಬಲಿಯಾದರು. ಡಿಕಾಕ್​ 39 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್​ಗಳಿಸಿ ಮುಜೀಬ್ ಓವರ್​ನಲ್ಲಿ ಔಟಾದರು. ಹೈದರಾಬಾದ್ ಬೌಲಿಂಗ್ ದಾಳಿಗೆ ನಲುಗಿದ ಇಶಾನ್ ಕಿಶನ್​ 21 ಎಸೆತಗಳನ್ನೆದುರಿಸಿ ಬೌಂಡರಿ ರಹಿತ 12 ರನ್​ಗಳಿಸಿ ಔಟಾದರು.
ಹಾರ್ದಿಕ್ ಪಾಂಡ್ಯ ಕೂಡ 7 ರನ್​ಗಳಿಸಿ 19ನೇ ಓವರ್​ನಲ್ಲಿ ಔಟಾದರು. ಆದರೆ ಪೊಲಾರ್ಡ್ ಕೊನೆಯ ಓವರ್​ನಲ್ಲಿ 2 ಸಿಕ್ಸರ್​ ಸೇರಿದಂತೆ 22 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 35 ರನ್​ಗಳಿಸಿ ತಂಡದ ಮೊತ್ತವನ್ನು 150ಕ್ಕೇರಿಸಿದರು.
ಹೈದರಾಬಾದ್ ಪರ ಮುಜೀಬ್​ ಮತ್ತು ವಿಜಯ್ ಶಂಕರ್ ತಲಾ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss