Wednesday, August 17, 2022

Latest Posts

ಅದಾನಿ ಸಮೂಹದ ಸುಪರ್ದಿಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಇಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಘೋಷಣೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿದ ಗೌತಮ್ ಅದಾನಿ , ವಿಶ್ವ ದರ್ಜೆಯ ಮುಂವೈ ವಿಮಾನ ನಿಲ್ದಾಣದ ಆಡಳಿತ ಮಂಡಳಿಯನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಮುಂಬೈ ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ ಎಂದು ಮಾತು ಕೊಡುತ್ತೇವೆ. ಭವಿಷ್ಯದ ಉದ್ಯಮ, ಬಿಡುವು ಹಾಗೈ ಮನರಂಜನೆ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅದಾನಿ ಸಮೂಹದಿಂದ ವಿಮಾನ ನಿಲ್ದಾಣದ ಎಕೋ ಸಿಸ್ಟಮ್ ರೂಪಿಸಲಾಗುವುದು. ನಾವು ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದ್ದಾರೆ.
ಅದಾನಿ ಎಂಟರ್​ಪ್ರೈಸಸ್​ನ ಸಂಪೂರ್ಣ ಒಡೆತನದಲ್ಲಿ ಇರುವ ಸಂಸ್ಥೆ ಅದಾನಿ ಏರ್​ಪೋರ್ಟ್ ಹೋಲ್ಡಿಂಗ್ಸ್ (AAHL). ಈ ವರ್ಷದ ಶುರುವಿನಲ್ಲಿ ಎಸಿಎಸ್​ಎ ಗ್ಲೋಬಲ್ (ACSA) ಮತ್ತು ಬಿಡ್ ಸರ್ವೀಸ್ ವಿಭಾಗ (ಮಾರಿಷಿಯಸ್) ಅಥವಾ ಬಿಡ್​ವೆಸ್ಟ್​ನಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (MIAL) ಶೇ 23.5ರಷ್ಟು ಪಾಲನ್ನು 1,685.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. MIALನ ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದಷ್ಟು ಷೇರು ಖರೀದಿಯ ಭಾಗವಾಗಿ ಈ ಮೇಲ್ಕಂಡ ಖರೀದಿ ಆಗಿತ್ತು.
ಲಖನೌ, ಜೈಪುರ್, ಗುವಾಹತಿ, ಅಹ್ಮದಾಬಾ, ತಿರುವನಂತಪುರಂ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (PPP) ಕಾರ್ಯ ನಿರ್ವಹಣೆ ಮಾಡುವುದಕ್ಕೆ ಈಚೆಗೆ ಅದಾನಿ ಸಮೂಹಕ್ಕೆ ಅನುಮತಿ ಸಿಕ್ಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!