ಮುಂಬೈ ಸಿದ್ಧಿವಿನಾಯಕ ದೇಗುಲ ಪ್ರಸಾದದ ಪೊಟ್ಟಣಗಳ ಮೇಲೆ ಇಲಿಗಳ ಓಡಾಟ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ಪ್ರಸಾದದ ಪೊಟ್ಟಣಗಳ ಮೇಲೆ ಇಲಿಗಳು ಓಡಾಡುತ್ತಿದ್ದವು ಎನ್ನಲಾದ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದ್ರೆ ಈ ಆರೋಪವನ್ನು ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್‌ (ಎಸ್‌ಎಸ್‌ಜಿಟಿ) ತಳ್ಳಿಹಾಕಿದೆ.

ತಿರು‍ಪತಿ ಪ್ರಸಾದ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ ಎಂಬುದರ ಕುರಿತು ವಿವಾದ ಭುಗಿಲೆದ್ದಿರುವ ನಡುವೆಯೇ, ಸಿದ್ಧಿವಿನಾಯಕ ದೇವಸ್ಥಾನ ಪ್ರಸಾದ ಕುರಿತ ಈ ವಿಚಾರ ಕಳವಳಕ್ಕೆ ಕಾರಣವಾಗಿದೆ.ನೀಲಿ ಬಣ್ಣದ ಟ್ರೆವೊಂದರಲ್ಲಿರುವ, ಪ್ರಸಾದದ ಹರಿದ ಪೊಟ್ಟಣಗಳ ಮೇಲೆ ಇಲಿಗಳು ಓಡಾಡುತ್ತಿರುವ ದೃಶ್ಯಗಳು, ಸಿದ್ಧಿವಿನಾಯಕ ದೇವಸ್ಥಾನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿರುವ ವಿಡಿಯೋ ಹರಿದಾಡಿತ್ತು.

ಆದ್ರೆ ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನಾ ಮುಖಂಡ ಹಾಗೂ ಟ್ರಸ್ಟ್‌ನ ಮುಖ್ಯಸ್ಥ ಸದಾ ಸರವಣಕರ್,’ದೇವಸ್ಥಾನದಲ್ಲಿ ಪ್ರತಿನಿತ್ಯ ಲಕ್ಷಗಟ್ಟಲೆ ಲಾಡುಗಳನ್ನು ವಿತರಿಸಲಾಗುತ್ತದೆ. ಲಾಡುಗಳನ್ನು ಸಂಗ್ರಹಿಸಿ ಇಡುವ ಜಾಗವೂ ಸ್ವಚ್ಛತೆಯಿಂದ ಕೂಡಿದೆ. ಆದರೆ, ವಿಡಿಯೋದಲ್ಲಿ ಕಾಣುವ ಸ್ಥಳ ಸ್ವಚ್ಛತೆಯಿಂದ ಕೂಡಿಲ್ಲ. ಇದು ಸಿದ್ಧಿವಿನಾಯಕ ದೇವಸ್ಥಾನದ್ದು ಅಲ್ಲ. ಬೇರೆ ಯಾವುದೋ ದೇಗುಲದಲ್ಲಿ ಚಿತ್ರೀಕರಿಸಿದ್ದರಿಬೇಕು’ ಎಂದು ಹೇಳಿದ್ದಾರೆ.

‘ಸಿ.ಸಿ.ಟಿವಿ ಯಲ್ಲಿನ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಡಿಸಿಪಿ ಶ್ರೇಣಿಯ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!