ಮುಂಬೈ ಜನತೆಗೆ ಸಂಚಾರ ದಟ್ಟಣೆಯಿಂದ ಮುಕ್ತಿ: ₹ 6,322 ಕೋಟಿ ವೆಚ್ಚದಲ್ಲಿ ಎರಡು ಬೃಹತ್ ಸುರಂಗ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನ ಟ್ರಾಫಿಕ್ ಸಮಸ್ಯೆ ಹೇಳತೀರದು. ಎಷ್ಟೇ ರಸ್ತೆಗಳನ್ನು ನಿರ್ಮಿಸಿದರೂ, ಸೇತುವೆಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ಮತ್ತೆ ಮತ್ತೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಂಬೈ ಮುನ್ಸಿಪಲ್ ಕೌನ್ಸಿಲ್ ಪೂರ್ವ ಮುಂಬೈ ಮತ್ತು ಪಶ್ಚಿಮ ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಟ್ರಾಫಿಕ್ ಸಮಸ್ಯೆ ತಪ್ಪಿಸಲು ರಸ್ತೆ ನಿರ್ಮಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಗೋರೆಗಾಂವ್‌ನ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಮುಳ್ಳುಂಡ್‌ನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿವರೆಗೆ 12 ಕಿಮೀ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತಿದೆ.

ಹಾಗಾಗಿಯೇ 4.7 ಕಿ.ಮೀ ದೂರದವರೆಗೆ ಎರಡು ಬೃಹತ್ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.  ಈ ಎರಡು ಪ್ರದೇಶಗಳ ನಡುವೆ ಸಂಜಯ್ ಗಾಂಧಿ ಇಂಟರ್ ನ್ಯಾಷನಲ್ ಪಾರ್ಕ್ ಇದೆ. ಉದ್ಯಾನವನದ ಸ್ವರೂಪಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ 13 ಮೀಟರ್ ಆಳದಲ್ಲಿ ಈ ಸುರಂಗ ಮಾರ್ಗಗಳನ್ನು ಮಾಡಲಾಗುತ್ತದೆ. ಈ ಎರಡು ಸುರಂಗಗಳ ನಿರ್ಮಾಣಕ್ಕೆ 6,322 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಬಿಎಂಸಿ ಪ್ರಸ್ತಾಪಿಸಿದೆ. ಈ ಕಾಮಗಾರಿಗಳು 2026ರ ವೇಳೆಗೆ ಲಭ್ಯವಾಗಲಿವೆ ಎಂದು ಬಿಎಂಸಿ ತಿಳಿಸಿದೆ.

ಈ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಮೂರು ಹಂತಗಳಲ್ಲಿ ನಡೆಯಲಿದೆ. ಎಲಿವೇಟೆಡ್ ಕಾರಿಡಾರ್, ಸುರಂಗಗಳು, ರೈಲ್ವೆ ಮೇಲ್ಸೇತುವೆಗಳು ಈ ಸಂಪರ್ಕ ರಸ್ತೆಯಲ್ಲಿವೆ. ಬಿಎಂಸಿ ಅಂದಾಜಿನ ಪ್ರಕಾರ ಈ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಒಟ್ಟು 8,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಿಂದೆ 4,700 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ಸಮಯ ಕಳೆದಂತೆ ಅಂದಾಜು ವೆಚ್ಚ ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!