ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ, ಯಾದಗಿರಿ:
ಯಾದಗಿರಿ ತಾಲೂಕಿನ ಮುನಗಾಲ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ಸಂಭವಿಸಿದೆ. ಸಿದ್ದಮ್ಮ ಗಂಡ ಭೀಮರಾಯ(50) ಮೃತ ದುರ್ದೈವಿ. ಕೂಲಿಯೇ ಜೀವನಧಾರ ಮಾಡಿಕೊಂಡಿದ್ದ ಮಹಿಳೆ ಬೇರೋಬ್ಬರ ಜಮೀನಿನಲ್ಲಿ ಶೇಂಗಾ ಬಿಡಿಸಲು ನಾಲ್ಕಾರು ಜನರ ಜತೆ ಹೋಗಿದ್ದರು. ಗುಡುಗು-ಮಿಂಚು ಆರಂಭಿಸುತ್ತಿದ್ದoತೆ ಜತೆಗಿದ್ದ ಇತರ ಕೂಲಿ ಕಾರ್ಮಿಕರು ಮನೆ ಕಡೆ ಮುಖ ಮಾಡಿದ್ದಾರೆ ಆದರೆ ಮೃತ ಮಹಿಳೆ ಸಿದ್ದಮ್ಮ ಮಳೆಯಿಂದ ತಪ್ಪಿಸಿಕೊಳ್ಳಲು ಗಿಡದ ಕೆಳಗೆ ಹೋಗಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಿದ್ದಮಳಿಗೆ ಓರ್ವ ಮಗನಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.