ಲಾಕಪ್​ ರಿಯಾಲಿಟಿ ಶೋ ಗೆದ್ದ ಮುನಾವರ್ ಫರೂಖಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟಿ ಕಂಗನಾ ರಣಾವತ್ ನಿರೂಪಣೆಯಲ್ಲಿ ಮೂಡಿ ಬಂದ ‘ಲಾಕಪ್​’ ರಿಯಾಲಿಟಿ ಶೋ ಫಿನಾಲೆ ಪೂರ್ಣಗೊಂಡಿದೆ.
ಶನಿವಾರ (ಮೇ 7) ರಾತ್ರಿ ನಡೆದ ಅದ್ದೂರಿ ಫಿನಾಲೆಯಲ್ಲಿ ಮುನಾವರ್ ಫರೂಖಿ ಅವರು’ಲಾಕಪ್​’ ಶೋನ ಕಪ್ ಎತ್ತಿದ್ದಾರೆ.
ಫ್ಯಾನ್ಸ್ ಕಡೆಯಿಂದ ಮುನಾವರ್​ಗೆ ಬರೋಬ್ಬರಿ 18 ಲಕ್ಷ ವೋಟ್​ ಸಿಕ್ಕಿತ್ತು. ಇದಲ್ಲದೆ, ಕಂಗನಾ ಕೂಡ ಅವರಿಗೆ ವೋಟ್ ಮಾಡಿದರು. ಇದರಿಂದ ಮುನಾವರ್ ಗೆದ್ದು ಬೀಗಿದರು.

ಲಾಕಪ್​’ ರಿಯಾಲಿಟಿ ಶೋ ಆರಂಭದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.ಹಲವು ವಿವಾದಾತ್ಮಕ ಸ್ಪರ್ಧಿಗಳು ಶೋನಲ್ಲಿ ಇದ್ದಿದ್ದರಿಂದ ಈ ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಂಡಿತು. ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.

‘ಲಾಕಪ್​’ ರಿಯಾಲಿಟಿ ಶೋಅನ್ನು ಏಕ್ತಾ ಕಪೂರ್​ ನಿರ್ಮಾಣ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಮುನಾವರ್ ವಿನ್ ಆದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ. ಇನ್ನು, ಪಾಯಲ್ ರೋಹಟ್ಗಿ ಅವರು ಮೊದಲ ರನ್ನರ್​ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಅಂಜಲಿ ಅರೋರಾ ಎರಡನೇ ರನ್ನರ್​ಅಪ್ ಆಗಿದ್ದಾರೆ.

ಮುನಾವರ್ ಅವರು 20 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಜತೆಗೆ ಅವರಿಗೆ ಕಾರು, ಸುಂದರ ಟ್ರೋಫಿ ಸಿಕ್ಕಿದೆ. ಇನ್ನು ಅವರ ಇಟಲಿ ಟ್ರಿಪ್​ನ ಸಂಪೂರ್ಣ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!