ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮುಂಡಗೋಡ:
ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಮೊಬೈಲ್ ಅಂಗಡಿ ಹಾಗೂ ಪೋಟೋ ಸ್ಟುಡಿಯೋದ ಮೇಲ್ಚಾವಣೆಯಿಂದ ಕೆಳಗೆ ಇಳಿದು ಲಕ್ಷಾಂತರ ರೂಪಾಯಿಯ ಮೌಲ್ಯದ ಮೊಬೈಲಗಳನ್ನು ಹಾಗೂ ಕ್ಯಾಮರಾಗಳನ್ನು ಕಳ್ಳತನ ಮಾಡಿರುವ ಘಟನೆ ಶನಿವಾರ ನಸುಕಿನಲ್ಲಿ ಜರುಗಿದೆ.
ಪಟ್ಟಣದ ನಿವಾಸಿಗಳಾದ ಶ್ರೀಧರ ಉಪ್ಪಾರ ಎಂಬುವರ ಶ್ರೀಮೊಬೈಲ್ ಅಂಗಡಿಯ ಹಾಗೂ ಉಮೇಶ ಕಲಾಲ ಎಂಬುವರ ಶಕ್ತಿ ಪೋಟೋ ಸ್ಟುಡಿಯೋ ಕಳ್ಳತನಗಳಾಗಿವೆ.
ಮೊಬೈಲ್ ಅಂಗಡಿಯ ಮೇಲ್ಮಾವಣಿಯಿಂದ ಕೆಳಗೆ ಇಳಿದು 1.50 ಲಕ್ಷ ರೂಪಾಯಿ ಮೌಲ್ಯದ 50ಕ್ಕೂ ಹೆಚ್ಚು ಮೊಬೈಲ್ಗಳನ್ನು ಕಳ್ಳತನ ಮಾಡಿದ್ದಾರೆ ಹಾಗೂ ಪೋಟೋ ಸ್ಟುಡಿಯೋದಲ್ಲಿ ಸುಮಾರು 1.80ಸಾವಿರ ಬೆಲೆಬಾಳುವ ಪೋಟೋ ಕ್ಯಾಮರಾ, ವಿಡಿಯೋ ಕ್ಯಾಮರಾ, ರುಟರ್ ಹಾಗೂ ಡಿವಿಆರ್ ಹಾರ್ಡಡಿಸ್ಕ ಸೇರಿದಂತೆ ಕಳ್ಳನೊಬ್ಬ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾನೆ.
ಬೆಳಿಗ್ಗೆ 4.30ರ ಸುಮಾರಿಗೆ ಅಂಗಡಿಯ ಮೇಲ್ಬಾವಣಿ ತೆಗೆದು ಕೆಳಗೆ ಇಳಿದಿರುವ ಕಳ್ಳ. ಕಳ್ಳತನ ಮಾಡುವಾಗ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದು ಕಳ್ಳನ ಗಮನಕ್ಕೆ ಬಂದಿದೆ. ಕೂಡಲೇ ಕ್ಯಾಮರಾವನ್ನು ಮುರಿದು ಹಾಕಿದ್ದಾನೆ. ಆದರೆ ಮತ್ತೊಂದು ಕ್ಯಾಮರಾದಲ್ಲಿ ಕಳ್ಳನ ಕರಾಮತ್ತು ದಾಖಲಾಗಿದೆ.
ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಶೀಲನೆ ನಡೆಸಿದರು ಶ್ವಾನವು ಮೊಬೈಲ್ ಅಂಗಡಿಯಿoದ ಪೋಟೋ ಸ್ಟೂಡಿಯೋವರೆಗೂ ಹೊಯಿತು. ಈ ಎರಡು ಕಳ್ಳತನ ಒಬ್ಬನೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.