Thursday, August 11, 2022

Latest Posts

ನಗರಸಭೆ ಆಯುಕ್ತರ ತಂಡ ಕಾರ್ಯಾಚರಣೆ: ದಾಸ್ತಾನಿಡಲಾಗಿದ್ದ 5 ಕ್ವಿಂಟಾಲ್‍ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ವಶಕ್ಕೆ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರದ ಅಂಗಡಿಯೊಂದರಲ್ಲಿ ದಾಸ್ತಾನಿಡಲಾಗಿದ್ದ 5 ಕ್ವಿಂಟಾಲ್‍ನಷ್ಟು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆ
ಆಯುಕ್ತ ಬಸವರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ಪ್ಲಾಸ್ಟಿಕ್ ವಸ್ತುಗಳ ಮಾರಾಟ ನಿಷೇಧವಿದ್ದರೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ನಗರಕ್ಕೆ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳು ರವಾನೆಯಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಹಿನ್ನೆಲೆ ಸಿಬ್ಬಂದಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಾ ಕಾಯಾಚರಣೆ ಕೈಗೊಂಡಾಗ ಸುಮಾರು 5 ಕ್ವಿಂಟಾಲ್ ಪ್ಲಾಸ್ಟಿಕ್ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಅದನ್ನು ನಗರಸಭೆಯ ವಶಕ್ಕೆ ಪಡೆದು ವಾಹನ ಚಾಲಕನಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಬಸವರಾಜ್ ತಿಳಿಸಿದ್ದಾರೆ.
ನಗರದ ಸಂಗೀತಾ ಸ್ಟೋರ್ ಹಾಗೂ ವರ್ಧಮಾನ್ ಅಂಗಡಿ ಮತ್ತು ಮೂಡಿಗೆರೆಯ ಅಂಗಡಿಗಳಿಗೆ ಪ್ಲಾಸ್ಟಿಕ್ ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿಯಿತು ಈ ಹಿನ್ನೆಲೆ ಸಂಬಂಧಿಸಿ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಹಾಗೂ ದಾಸ್ತಾನುವಿನ ಬಗ್ಗೆ ಪರಿಶೀಲಿಸಲಾಗಿದ್ದು. ಈ ವೇಳೆ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ಜಾಗ ಖಾಲಿಮಾಡಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡುವ ಇಂತಹ ಅಂಗಡಿಗಳಿಗೆ ಹೆಚ್ಚು ದಂಡ ವಿಧಿಸಿ ಮಾಲೀಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಂಗಡಿಯನ್ನು ಮುಚ್ಚವ ನಿರ್ಧಾರ ಕೈಗೊಳ್ಳಲಾಗುವುದು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಅಧಿಕಾರಿ ಈಶ್ವರ್, ಶ್ರೀನಿವಾಸ್, ಪರಿಸರ ಅಭಿಯಂತರ ಅಣ್ಣಯ್ಯ, ವಿವೇಕ್, ಇಂಜಿನಿಯರ್ ಚಂದನ್, ಕಂದಾಯಾಧಿಕಾರಿ ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss