Tuesday, June 28, 2022

Latest Posts

ಫುಟ್‍ಪಾತ್ ಒತ್ತುವರಿ: ನಗರಸಭೆಯಿಂದ ಅಂಗಡಿ ತೆರವು

ಹೊಸದಿಗಂತ ವರದಿ, ಕೊಡಗು:

ನಗರದ ಇಂದಿರಾಗಾಂಧಿ ವೃತ್ತದ ಬಳಿ ಫುಟ್‍ಪಾತ್ ಒತ್ತುವರಿ ಮಾಡಿಕೊಂಡು ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಅಂಗಡಿಯನ್ನು ಪೊಲೀಸರು ತೆರವುಗೊಳಿಸಿದರು.
ಫುಟ್‍ಪಾತ್‍ನಲ್ಲಿ ಅಂಗಡಿ ಹಾಕಿದ್ದರಿಂದ ಸಾರ್ವಜನಿಕರಿಗೆ ನಡೆದಾಡಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಸ್ಥಳಕ್ಕಾಗಮಿಸಿದ ಮಡಿಕೇರಿ ವೃತ್ತ ನಿರೀಕ್ಷಕ ವೆಂಕಟೇಶ್ ಅವರು ಹಣ್ಣಿನ ಅಂಗಡಿಯನ್ನು ತೆರವು ಮಾಡುವಂತೆ ವ್ಯಾಪಾರಿಗೆ ಸೂಚಿಸಿದ್ದರು. ಈ ವೇಳೆ ಹಣ್ಣಿನ ವ್ಯಾಪಾರಿ ಮಾಸ್ಕ್ ಕೂಡ ಹಾಕಿರಲಿಲ್ಲ. ಮಾಸ್ಕ್ ಧರಿಸುವಂತೆ ಹೇಳಿದಾಗ ಪೊಲೀಸ್ ಅಧಿಕಾರಿ ಮತ್ತು ವ್ಯಾಪಾರಿ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು.
ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಫುಟ್’ಪಾತ್ ಒತ್ತುವರಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ದಂಡ ವಿಧಿಸಿದರು. ನಂತರ ಹಣ್ಣಿನ ಅಂಗಡಿಯನ್ನು ತೆರವುಗೊಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss