spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಲೆ ಪ್ರಕರಣ: ಐದು ಜನ ಸುಪಾರಿ ಹಂತಕರ ಬಂಧನ

- Advertisement -Nitte

ಹೊಸದಿಗಂತ ವರದಿ,ವಿಜಯಪುರ:

ವಿಜಯಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ರಸ್ತೆ ಅಪಘಾತ ಎಂದು ಬಿಂಬಿಸಲಾಗಿದ್ದ, ಐದು ಜನ ಸುಪಾರಿ ಹಂತಕರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಹೊರ ವಲಯ ಇಟ್ಟಂಗಿಹಾಳ ಕ್ರಾಸ್ ಬಳಿ ಅನಿಲ ಬಿರಾದಾರ ಎಂಬವರನ್ನು ಹತ್ಯೆ ಮಾಡಿ ಅಪಘಾತ ಎಂದು ಬಿಂಬಿಸಲಾಗಿದ್ದ ಪ್ರಕರಣದ ಆರೋಪಿಗಳಾದ ಬನ್ನೆಪ್ಪ ಹಣಮಂತ ಬಿರಾದಾರ, ಸುರೇಶ ಕಲ್ಲಪ್ಪ ಅವಟಿ, ಬೀರಪ್ಪ ಸದಾಶಿವ ಗುಗವಾಡ, ಕಿರಣ ಉಮೇಶ ಅಸ್ಕಿ, ರಾಜು ಕಿಶೋರ ಆಸಂಗಿ ಬಂಧಿತ ಆರೋಪಿಗಳು ಎಂದರು.
ಅಲ್ಲದೆ 2.50 ಲಕ್ಷ ರೂ. ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಿಂದ ಒಂದು ರಾಡ್, ಎರಡು ಬೈಕ್, ಮೊಬೈಲ್ ಸೇರಿದಂತೆ 35,800 ಸುಪಾರಿ ಹಣವನ್ನು ಜಪ್ತಿ ಮಾಡಲಾಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ಸಿಪಿಐಗಳಾದ ರವೀಂದ್ರ ನಾಯ್ಕೊಡಿ, ಸಂಗಮೇಶ ಪಾಲಬಾವಿ, ಪಿಎಸ್ ಐ ಜಿ.ಎಸ್. ಉಪ್ಪಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss