Wednesday, August 17, 2022

Latest Posts

ನ್ಯಾಯಾಲಯದ ಆವರಣದಲ್ಲಿ ಮಚ್ಚಿನಿಂದ ಕೊಲೆ ಪ್ರಕರಣ: ಸ್ಥಳಕ್ಕೆ ವರಿಷ್ಠಾಧಿಕಾರಿ ಸೈದುಲು ಅಡಾವತ್ ಭೇಟಿ, ಪರಿಶೀಲನೆ

ಹೊಸ ದಿಗಂತ ವರದಿ, ಬಳ್ಳಾರಿ:

ವಿಜಯನಗರ ನೂತನ ಜಿಲ್ಲೆ ಹೊಸಪೇಟೆ ನಗರದ ನ್ಯಾಯಾಲಯದ ಆವರಣದಲ್ಲಿ ಮಚ್ಚಿನಿಂದ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದಗದಿಗಾರರೊಂದಿಗೆ ಮಾತನಾಡಿದ ಅವರು, ಕೊರ್ಟ್ ಆವರಣದಲ್ಲಿ ಮಚ್ಚಿನಿಂದ ನ್ಯಾಯವಾದಿಯೋಬ್ಬರನ್ನು ಕೊಲೆ ಮಾಡಲಾಗಿದೆ. ನಗರದ ಮ್ಯಾಸಕೇರಿ ನಿವಾಸಿ ಹಾಗೂ ನ್ಯಾಯವಾದಿ ತಾರಿಹಳ್ಳಿ ವೆಂಕಟೇಶ್‌ ಎನ್ನುವವರು ಕೊಲೆಯಾದ ವ್ಯಕ್ತಿ. 23 ವರ್ಷದ ಸಹೋದರ ಸಂಬಂಧಿ ತಾರಿಹಳ್ಳಿ ಮನೋಜ್ ಎನ್ನುವ ಯುವಕ ಕೊಲೆ ಮಾಡಿದ್ದಾನೆ. ಯುವಕನ ಪ್ರಾಥಮಿಕ ವಿಚಾರಣೆಯಲ್ಲಿ ಆಸ್ತಿ ವಿಚಾರ ಹಾಗೂ ಕೆಲಸ ಬಿಡಿಸಿದ್ದರ ಕೋಪವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಆರೋಪಿ ಮನೋಜ್​ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದರು.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಕೋಪ ಯಾಕೆ ಬಂತು ಎಂಬುದು ವಿಚಾರಣೆಯಿಂದ ಬಹಿರಂಗವಾಗಬೇಕಾಗಿದೆ. ಆರೋಪಿ ಮನೋಜ್ ಗೋಣಿ ಚೀಲದಲ್ಲಿ ಮಚ್ಚನ್ನು ತೆಗೆದುಕೊಂಡು ನ್ಯಾಯಾಲಯಕ್ಕೆ ಬಂದಿದ್ದಾನೆ. ನಾಲ್ಕನೇ ಶನಿವಾರ ಹಿನ್ನೆಲೆ ಕೋರ್ಟ್​ನಲ್ಲಿ ಕಡಿಮೆ ಪೊಲೀಸರಿದ್ದರು.
ಮಚ್ಚಿನಿಂದ ಕೊಲೆ ಮಾಡುವಾಗ ವಕೀಲರು ಓಡಿ ಹೋಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸಿಸಿ ಕ್ಯಾಮೆರಾ ಪರಿಶೀಲಸಬೇಕಾಗಿದೆ ಎಂದು ತಿಳಿಸಿದರು.

ಸಚಿವ ಆನಂದ ಸಿಂಗ್ ಸಾಂತ್ವನ
ನಗರದ 100 ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಭೇಟಿ ನೀಡಿ ಕೊಲೆಯಾದ ತಾರಿಹಳ್ಳಿ ವೆಂಕಟೇಶ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕೋರ್ಟ್ ಆವರಣದಿಂದ ತಾರಿಹಳ್ಳಿ ವೆಂಕಟೇಶ ಅವರ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ‌ ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ತರಲಾಯಿತು. ನಂತರ ಆಸ್ಪತ್ರೆಗೆ ತೆರಳಿದ ಸಚಿವ ಆನಂದ ಸಿಂಗ್ ಅವರ ಎದುರು ತಾರಿಹಳ್ಳಿ ವೆಂಕಟೇಶರ ಸಹೋದರ ಕಣ್ಣೀರು ಹಾಕಿ ದುಖಃವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ತಾರಿಹಳ್ಳಿ ವೆಂಕಟೇಶ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!