spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಕಲಚೇತನ ವ್ಯಕ್ತಿಯ ಕೊಲೆ ಪ್ರಕರಣ: ಆರೋಪಿಗಳ ಬಂಧನ

- Advertisement -Nitte

ಹೊಸದಿಗಂತ ವರದಿ, ಮಡಿಕೇರಿ:

ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಅಂಗವಿಕಲ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮದ ಬಿ.ಎಸ್.ಸಂದೀಪ್, ಬಿ.ಜೆ.ಸುಂದರ ಹಾಗೂ ಗೋಣಿಕೊಪ್ಪದ ಮೊಹಮ್ಮದ್ ಸುಲೈಮಾನ್@ ವಿನೋದ್ ಪೂಜಾರಿ ಬಂಧಿತ ಆರೋಪಿಗಳು.
ಕಳತ್ಮಾಡು ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಅಂಗವಿಕಲ ಬಿ.ಜಿ.ಉದಯಕುಮಾರ್ ಎಂಬವರನ್ನು ಸೆ.9-10ರ ನಡುವೆ ಯಾರೋ ದುಷ್ಕರ್ಮಿಗಳು ಮರ್ಮಾಂಗಕ್ಕೆ ಹೊಡೆದು ಗಾಯಗೊಳಿಸಿ ಹತ್ಯೆ ಮಾಡಿದ್ದರು.
ಈ ಸಂಬಂಧ ನೀಡಿದ ದೂರಿನ ಮೇರೆ ಸಿದ್ದಾಪುರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ನೇತೃತ್ವದ ತಂಡಗಳು ಸೆ. 16ರಂದು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಆಸ್ತಿಯ ವಿಚಾರದಲ್ಲಿ ಸೆ.9ರ ರಾತ್ರಿ ಉದಯ ಕುಮಾರ್ ಅವರನ್ನು ಕಳತ್ಮಾಡು ಗ್ರಾಮದಿಂದ ಕಾರಿನಲ್ಲಿ ಎತ್ತಿಕೊಂಡು ಹೋಗಿ ಗೋಣಿಕೊಪ್ಪ ಪಂಚವಳ್ಳಿ ಕಡೆಗೆ ಹೋಗುವ ಮಾರ್ಗದ ಮಧ್ಯದಲ್ಲಿನ ನಿರ್ಜನ ಪ್ರದೇಶದಲ್ಲಿ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ, ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ ನಂತರ ಮೃತ ಶರೀರವನ್ನು ಆತನ ವಾಸದ ಮನೆಗೆ ತಂದು ಮಲಗಿಸಿರುವುದಾಗಿ ಪೊಲೀಸ್ ತನಿಖೆಯ ಸಂದರ್ಭ ಬೆಳಕಿಗೆ ಬಂದಿದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್, ಸಿದ್ದಾಪುರ ಪೊಲೀಸ್ ಠಾಣಾ ಪಿ.ಎಸ್.ಐ ಪಿ. ಮೋಹನ್‌ ರಾಜು, ಎ.ಎಸ್.ಐ. ಎನ್.ಟಿ.ತಮ್ಮಯ್ಯ, ಸಿಬ್ಬಂದಿಗಳಾದ ಟಿ.ಜೆ.ರತನ್, ವಸಂತಕುಮಾರ್.ಹೆಚ್.ಕೆ., ಮಲ್ಲಪ್ಪ ಮುಶಿಗೇರಿ, ಹೆಚ್.ಎಂ.ಲಕ್ಷ್ಮೀಕಾಂತ, ಗೋವರ್ಧನ, ಕಿರಣ, ಚರ್ಮಣ, ರಾಜೇಶ್ ಹಾಗೂ ಗಿರೀಶ್ ಭಾಗವಹಿಸಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss