Thursday, August 11, 2022

Latest Posts

ಮಹಿಳೆಯ ಹತ್ಯೆ: 3 ಆರೋಪಿಗಳ ಬಂಧನ

ಹೊಸದಿಗಂತ ವರದಿ, ಶಿವಮೊಗ್ಗ:

ಮಹಿಳೆಯೋರ್ವರ ಹತ್ಯೆ ಮಾಡಿ, ಅದನ್ನು ಅಪಘಾತ ಎಂಬಂತೆ ಬಿಂಬಿಸಿದ್ದ ಮೂವರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರನ್ನು ತೀರ್ಥಹಳ್ಳಿ ತಾಲೂಕು ಕಮ್ಮರಡಿಯ ರವೀಶ್(32), ಆದರ್ಶ(31) ಮತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಸಂದೀಪ್(30) ಎಂದು ಗುರುತಿಸಲಾಗಿದೆ.
ಮದುವೆ ಆಗುತ್ತೇನೆ ಎಂದಿದ್ದ !
ತೀರ್ಥಹಳ್ಳಿ ಪಪಂನಲ್ಲಿ ನೇತ್ರಾವತಿ(39) ಎಂಬುವವರು ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಇವರ ಪತಿ ತೀರಿಕೊಂಡಿದ್ದರು. ನೇತ್ರಾವತಿ ಅವರ ಪರಿಚಯ ಮಾಡಿಕೊಂಡಿದ್ದ ಕಮ್ಮರಡಿರ ರವೀಶ್, ಮದುವೆ ಆಗುವುದಾಗಿ ನಂಬಿಸಿದ್ದ. ಆದರೆ ಇತ್ತೀಚೆಗೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ನೇತ್ರಾವತಿ ಅವರು ಒತ್ತಡ ಹೇರಿದಾಗ ಕೊಲೆ ಸಂಚು ರೂಪಿಸಿದ್ದರು. ಅದರಂತೆ ಫೆಬ್ರವರಿ 25ರ ರಾತ್ರಿ ಮದುವೆ ವಿಷಯ ಮಾತನಾಡಲು ಒಬ್ಬರೇ ಬರುವಂತೆ ನೇತ್ರಾವತಿ ಅವರಿಗೆ ಬರಲು ರವೀಶ ತಿಳಿಸಿದ್ದ. ನೇತ್ರಾವತಿ ತಮ್ಮ ಮನೆಯಲ್ಲಿ ಇದನ್ನು ತಿಳಿಸಿದ್ದರು. ಜಟ್ಟಿನಮಕ್ಕಿ ಬಳಿ ಬಂದ ನೇತ್ರಾವತಿ ಅವರ ತಲೆಗೆ ರಾಡ್‌ನಿಂದ ಹೊಡೆದು ಸಾಯಿಸಿದ್ದರು. ಬಳಿಕ ಸ್ಕೂಟರ್ ಅಪಘಾತದಲ್ಲಿ ಸತ್ತಿದ್ದಾರೆ ಎಂದು ಬಿಂಬಿಸಲು ಸ್ಕೂಟರ್ ಪಕ್ಕ ಶವ ಇರಿಸಿ ಪರಾರಿ ಆಗಿದ್ದರು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಡಿವೈಎಸ್‌ಪಿ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್, ಪಿಎಸ್ಸೈ ಯಲ್ಲಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss