ಭಜರಂಗದಳ ಕಾರ್ಯಕರ್ತನ ಕೊಲೆ ಪೂರ್ವ ನಿಯೋಜಿತ: ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿ

ಹೊಸದಿಗಂತ ವರದಿ,ಕಲಬುರಗಿ:

ಭಜರಂಗದಳ ಕಾರ್ಯಕರ್ತನ ಕೊಲೆ ವ್ಯೆಯಕ್ತಿಕ, ಅಮಲಿನಲ್ಲಿ ನಡೆದಿರುವ ಕೊಲೆ ಎಂಬ ಶಿವಮೊಗ್ಗ ಶಾಸಕ ಸಂಗಮೇಶ್ ಹೇಳಿಕೆಗೆ ಶ್ರೀರಾಮ ಸೇನೆ‌ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷಾ ಕೊಲೆ ಪ್ರಕರಣ ತನಿಖಾವಸ್ಥೆಯಲ್ಲಿದೆ. ಮುಸ್ಲಿಂರು ಕೊಲೆ ಮಾಡಿದ್ದಾರೆ ಅನ್ನೋದನ್ನು ಮುಚ್ಚಿ ಹಾಕುವುದಕ್ಕೆ ಈ ರೀತಿ ಹೇಳಿಕೆ ಕೊಟ್ಟು ಮುಸ್ಲಿಂರ ರಕ್ಷಣೆಗೆ ನಿಂತಿದ್ದಾರೆ ಎಂದು ಕಿಡಿಕಾರಿದರು.

ಹಿಂದು ಸಂಘಟನೆಯ ಕಾರ್ಯಕರ್ತನ ಕೊಲೆ ಅತ್ಯಂತ ಖಂಡನಿಯ., ಸರ್ಕಾರ, ಈಶ್ವರಪ್ಪ ಇವಾಗ ಹೇಳ್ತಿದ್ದಾರೆ ಇದನ್ನು ಮಟ್ಟ ಹಾಕುತ್ತೇವೆ ಎಂದು, ಈ ಹಿಂದೆ ಹಲವಾರು ಬಾರಿ ಹರ್ಷಾ,ನ ಕೊಲೆಗೆ ಸಂಚು ರೂಪಿಸಿ ವಿಫಲರಾಗಿದ್ದರು. ಕೊಲೆ ಸಂಚಿನ ಬಗ್ಗೆ ಅಲ್ಲಿನ ರಾಜಕಾರಣಿಗಳಿಗೆ ಗೊತ್ತಿರಲಿಲ್ಲವಾ..? ಸೂಕ್ತವಾದ ಕ್ರಮ ತೆಗದುಕೊಳ್ಳದ ಹಿನ್ನಲೆ ಇವಾಗ ಹರ್ಷಾನ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.

ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದೆ.

ಕೊಲೆಯಾದ ಹರ್ಷಾ ಕಳೆದ ಹಲವು ವರ್ಷಗಳಿಂದ ಭಜರಂಗದಳ ಸಕ್ರಿಯ ಕಾರ್ಯಕರ್ತನಾಗಿದ್ದ, ಕಠೋರ ಹಿಂದುವಾದಿಯಾಗಿದ್ದ ಹರ್ಷಾ,ನನ್ನು ಸಹಿಸದ ಮುಸ್ಲಿಂವಾದಿಗಳು ಇತನ ಕೊಲೆ ಮಾಡಿದ್ದಾರೆ. ಮುಸ್ಲಿಂ ಪೇಜ್ ನಲ್ಲಿ ಈ ಹಿಂದೆ ಹರ್ಷಾನ ಪೋಟೊ ಹಾಕಿ ವಿಚಾರಿಸಿಕೊಳ್ಳಿ ಅಂತಾ ಬರಹ ಹಾಕಿದ್ದರು.

ಇದೆಲ್ಲದರ ಹಿಂದೆ ಮಸ್ಲಿಂ ಸಂಘಟನೆಯ ದೊಡ್ಡ ಷಡ್ಯಂತ್ರವೆ ಇದೆ. ಹೀಗೆ ಬಿಟ್ಟರೆ ಎಸ್‌ಡಿಪಿಐ, ಪಿಎಫ್ಐ ನವರು ಹಿಂದು ಕಾರ್ಯಕರ್ತರ ಕೊಲೆ ಮಾಡುತ್ತಾ ಹೋಗ್ತಾರೆ.
ರಾಜ್ಯದಲ್ಲಿ ಎಸ್ ಡಿ ಪಿ ಐ , ಪಿ ಎಫ್ ಐ ಯನ್ನ ಮಟ್ಟ ಹಾಕುಬೇಕು ಎಂದು ಒತ್ತಾಯಿಸಿದರು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!