ಗ್ರೀಷ್ಮಾ ವೆಕಾರಿಯಾ ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗ್ರೀಷ್ಮಾ ವೆಕಾರಿಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್​ನ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದ್ದು, ಆರೋಪಿ ಫೆನಿಲ್ ಗೋಯಾನಿಗೆ ಮರಣದಂಡನೆ ವಿಧಿಸಿದೆ.
ವೆಕಾರಿಯಾ ಕೊಲೆ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ವಿಡಿಯೋ ಸಾಕ್ಷ್ಯವೇ ಪ್ರಕರಣದ ಪ್ರಮುಖ ಭಾಗವಾಗಿತ್ತು. ಆರೋಪಿ ಯೋಜಿತ ರೀತಿಯಲ್ಲಿ ಈ ಕೊಲೆ ಮಾಡಿದ್ದಾನೆ ಎಂದು ಗ್ರೀಷ್ಮಾ ಪರ ವಕೀಲರು ಕೋರ್ಟ್​ ಗಮನಕ್ಕೆ ತಂದಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಅಂತಿಮವಾಗಿ ಆರೋಪಿಗೆ ಮರಣದಂಡನೆ ವಿಧಿಸಿದ್ದಾರೆ.

ಏನಿದು ಪ್ರಕರಣ:
ಗ್ರೀಷ್ಮಾ ವೆಕಾರಿಯಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಫೆನಿಲ್ ಗೋಯಾನಿ ಫೆಬ್ರವರಿ 12 ರಂದು ಸೂರತ್‌ನ ಕಮ್ರೇಜ್‌ನ ಪಸೋದ್ರಾದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಕೊಲೆಗೂ ಮುನ್ನ ಫೆನಿಲ್ ಸಂಪೂರ್ಣ ಯೋಜನೆ ಸಿದ್ಧಪಡಿಸಿಕೊಂಡಿದ್ದ. ಪ್ಲಾನ್​ ಪ್ರಕಾರ ಗ್ರೀಷ್ಮಾಳ ಚಿಕ್ಕಪನನ್ನು ಭೇಟಿ ಮಾಡಿದ್ದ. ಮದುವೆ ಆಗುವಂತೆ ಗ್ರೀಷ್ಮಾಳನ್ನು ಮನವೊಲಿಸುವ ಪ್ರಯತ್ನ ಮಾಡಿದ್ದ.ಆದರೆ ಅದಕ್ಕೆ ಒಪ್ಪದಿದ್ದಾಗ ಚಾಕುವಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದ ಈ ವೇಳೆ ಬಿಡಿಸಿಕೊಳ್ಳಲು ಬಂದ ಚಿಕ್ಕಪ್ಪ ಹಾಗೂ ಅವಳ ಸಹೋದರನ ಮೇಲೂ ಫೆನಿಲ್​ ದಾಳಿ ಮಾಡಿದ್ದ, ಬಳಿಕ ಗ್ರೀಷ್ಮಾಳನ್ನು ಕತ್ತು ಸೀಳಿ ಕೊಲೆ ಮಾಡಿದ್ದು, ನಂತರ ಅಲ್ಲಿಂದ ತಪ್ಪಿಸಿಕೊಳ್ಳಲು ಕೈ ಕತ್ತರಿಸಿಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಈ ವೇಳೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆನಿಲ್​​ ಗುಣಮುಖರಾದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!