Tuesday, July 5, 2022

Latest Posts

ಬುದ್ದಿವಾದಕ್ಕೂ ಬಗ್ಗದೇ ಅಕ್ರಮ ಸಂಬಂಧ ಮುಂದುವರಿಸಿದ್ದ ಪತ್ನಿ ಕೊಂದ ಪತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ದಿಗಂತ ವರದಿ ಮೈಸೂರು:

ಎಷ್ಟೇ ಬುದ್ದಿವಾದ ಹೇಳಿದರೂ ಪರಪುರುಷನೊಂದಿಗೆ ಅಕ್ರಮ ಸಂಬAಧವನ್ನು ಮುಂದುವರಿಸಿದ್ದ ಪತ್ನಿಯನ್ನ ಆಕೆಯ ಪತಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ನಡೆದಿದೆ.
ನಳಿನಿ(32) ಕೊಲೆಯಾದವಳು. ಆಕೆಯ ಪತಿ ರಾಜೇಶ್(40) ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಮಕ್ಕಳ ತಾಯಿಯಾದ ನಳಿನಿಗೆ ಪರಪುರುಷನ ಜೊತೆ ಅಕ್ರಮ ಸಂಭAದ ಇತ್ತು.ಟೂ ವ್ಹೀಲರ್ ಮೆಕ್ಯಾನಿಕ್ ಆಗಿರುವ ಪತಿ ರಾಜೇಶ್ ಈ ವಿಚಾರದಲ್ಲಿ ಗಲಾಟೆ ಮಾಡಿದ್ದಾನೆ.ದಂಪತಿ ನಡುವೆ ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ಆಗಿದೆ. ಅಕ್ರಮ ಸಂಭAಧ ಸಂಪರ್ಕ ಮುರಿಯುವ ಉದ್ದೇಶದಿಂದ ರಾಜೇಶ್ ತನ್ನ ಸಂಸಾರವನ್ನ
ರಮಾಬಾಯಿ ನಗರದಿಂದ ಜಯನಗರಕ್ಕೆ ಶಿಫ್ಟ್ ಮಾಡಿದ್ದಾನೆ.ಹೀಗಿದ್ದರೂ ನಳಿನಿ ಅಕ್ರಮ ಸಂಬAಧವನ್ನು ಮುಂದುವರೆಸಿದ್ದಾಳೆ.ಇದೇ ವಿಚಾರದಲ್ಲಿ ಇಬ್ಬರ ನಡುವೆ ಮತ್ತೆ ಗಲಾಟೆ ಆಗಿದೆ.
ಕುಡಿದ ಮತ್ತಿನಲ್ಲಿದ್ದ ರಾಜೇಶ್ ತನ್ನ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಬಗ್ಗೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss