Wednesday, July 6, 2022

Latest Posts

ಐಸಿಎಸ್ ಉಗ್ರ ಸಂಘಟನೆಯ ನಿಯತಕಾಲಿಕೆಯಲ್ಲಿ ಮುರ್ಡೇಶ್ವರದ ಶಿವನ ಮೂರ್ತಿ ವಿರೂಪ: ಬಿಜೆಪಿ ಯುವ ಮೋರ್ಚಾ ಖಂಡನೆ

ಹೊಸ ದಿಗಂತ ವರದಿ,ಮುರ್ಡೇಶ್ವರ:

ಐಸಿಸ್ ಉಗ್ರ ಸಂಘಟನೆಯ ವಾಯ್ಸ್ ಆಪ್ ಹಿಂದ್ ನಿಯತಕಾಲಿಕೆಯಲ್ಲಿ ಮುರ್ಡೇಶ್ವರದ ಶಿವನ ಮೂರ್ತಿ ವಿರೂಪಗೊಳಿಸಿರುವುದನ್ನು ಬಿಜೆಪಿ ಯುವ ಮೋರ್ಚಾ ಖಂಡಿಸಿ ಮುರ್ಡೇಶ್ವರ ಮಹಾದ್ವಾರದ ಎದುರು ಐ.ಸಿ.ಎಸ್ ಉಗ್ರನ ಪ್ರತಿಕೃತಿಯನ್ನು ದಹಿಸಿದರು.
ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ನ್ನು ಹೆದರಿಸುವ ತಂತ್ರಗಾರಿಕೆಗಾಗಿ ಉಗ್ರರು ಈ ರೀತಿಯ ಕೃತ್ಯ ನಡೆಸಿದ್ದು ಪೊಲೀಸ್ ಇಲಾಖೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ನಡೆಸಬೇಕು ದೇವಾಲಯಕ್ಕೆ ವಿಶೇಷ ಭದ್ರತೆ ಒದಗಿಸಬೇಕು ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವವರ ಮೇಲೆ ಸೂಕ್ತ
ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss