ವಿಶ್ವದಲ್ಲಿ ಸುಳ್ಳು ಹರಡುವ ಮಾಧ್ಯಮವನ್ನು ಮಸ್ಕ್‌ ಖರೀದಿಸಿದ್ದಾರೆ: ಬಿಡೆನ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಲೋನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ವಿಶ್ವದಾದ್ಯಂತ ಸುಳ್ಳುಗಳನ್ನು ಹರಡುವ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿಸಿದ್ದಾರೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ವ್ಯಂಗ್ಯವಾಡಿದ್ದಾರೆ.
“ಟ್ವಿಟರ್ ಶುಕ್ರವಾರ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಆದರೆ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಜವಾಬ್ದಾರಿಯುತ ತಂಡದಲ್ಲಿ ಈ ಉದ್ಯೋಗ ಕಡಿತಗಳು ಚಿಕ್ಕ ಪ್ರಮಾಣದಲ್ಲಿವೆ” ಎಂದು ಅವರು ಹೇಳಿದರು. ಜೊತೆಗೆ ಜಾಹೀರಾತು ನೀತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಸಹ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದ್ವೇಷದ ಭಾಷಣ ಮತ್ತು ತಪ್ಪು ಮಾಹಿತಿಯನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆ ಬಿಡೆನ್ ಸ್ಪಷ್ಟವಾಗಿದ್ದಾರೆ.
“ಟ್ವಿಟರ್‌, ಫೇಸ್‌ಬುಕ್ ಮತ್ತು ಯಾವುದೇ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರಿಗೆ ತಪ್ಪು ಮಾಹಿತಿಯನ್ನು ಹರಡುವುದರ ಬಗ್ಗೆ ಬಿಡೆನ್‌ ಗೆ ಕಳವಳವಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!