ಟ್ವೀಟರ್‌ ನಿಂದ ಅರ್ಧದಷ್ಟು ಉದ್ಯೋಗಿಗಳಿಗೆ ಗೇಟ್‌ ಪಾಸ್‌ ಕೊಡಲು ಮುಂದಾದ ಮಸ್ಕ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಸ್ಲಾ ಮಾಲೀಕ ಹಾಗೂ ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರುವ ಎಲಾನ್‌ ಮಸ್ಕ್‌ ಸಾಮಾಜಿಕ ಮಾಧ್ಯಮ ಕಂಪನಿ ಟ್ವೀಟರ್‌ ಅನ್ನು ವಶಪಡಿಸಿಕೊಂಡ ಶುರುವಿನಲ್ಲೇ ಸಿಇಒ ಸೇರಿದಂತೆ ಕೆಲ ಉನ್ನತ ಅಧಿಕಾರಿಗಳನ್ನು ಹೊರ ಹಾಕಿದ್ದು ಇದೀಗ ಅರ್ಧದಷ್ಟು ಉದ್ಯೋಗಿಗಳನ್ನು ಕಂಪನಿಯಿಂದ ತೆಗೆದು ಹಾಕಲು ನಿರ್ಧರಿಸಿದ್ದಾರೆ ಎಂದು ಕೆಲ ಬಲ್ಲ ಮೂಲಗಳು ವರದಿ ಮಾಡಿವೆ.

50ಶೇಕಡಾದಷ್ಟು ಅಂದರೆ ಸುಮಾರು 3,700 ಉದ್ಯೋಗಿಗಳನ್ನು ವಜಾ ಮಾಡಲು ಮಸ್ಕ್‌ ಮುಂದಾಗಿದ್ದಾರೆ ಎನ್ನಲಾಗಿದೆ. ಕಂಪನಿಯಲ್ಲಿ ವೆಚ್ಚಕಡಿತ ಮಾಡಲು ಮಸ್ಕ್ ಮುಂದಾಗಿದ್ದು ಅದರ ಭಾಗವಾಗಿ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದ್ದಾರೆ. ಶುಕ್ರವಾರದಂದು ಈ ಕುರಿತು ಉದ್ಯೋಗಿಗಳಿಗೆ ಅವರು ತಿಳಿಸಿದ್ದಾರೆ ಎಂದು ಹಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅಲ್ಲದೇ ಟ್ವೀಟರ್‌ ನ ʼಎಲ್ಲಿಂದಲಾದರೂ ಕೆಲಸ ಮಾಡಿʼ ಎಂಬ ನೀತಿಯನ್ನು ಅವರು ಮೊಟಕುಗೊಳಿಸುತ್ತಿದ್ದು ತಕ್ಷಣವೇ ಬಹುತೇಕ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವಂತೆ ಸೂಚಿಸಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!