ಧಾರ್ಮಿಕ ಸೌಹಾರ್ದತೆ: ರಾಮಾಲಯ ಕಟ್ಟಿದ ಮುಸ್ಲಿಂ ಭಕ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮ ದೇಶವು ವಿವಿಧ ಧರ್ಮಗಳು ಮತ್ತು ವಿಭಿನ್ನ ಸಂಸ್ಕೃತಿಗಳ ತವರೂರು. ಎಲ್ಲಾ ಜಾತಿ, ಧರ್ಮದವರೂ ಅನ್ಯ ಧರ್ಮ ದೇವರುಗಳನ್ನು ಪೂಜಿಸಿ ಆರಾಧಿಸುತ್ತಾರೆ. ಈ ಸಾಲಿಗೆ ನೆರೆ ರಾಜ್ಯ ತೆಲಂಗಾಣದ ಖಮ್ಮಂನಲ್ಲಿರುವ ಒಬ್ಬ ಮುಸ್ಲಿಂ ವ್ಯಕ್ತಿ ಸೇರಿದ್ದಾರೆ. ಸ್ವಂತ ಹಣ ಹಾಗೂ ದೇಣಿಗೆ ಸಂಗ್ರಹಿಸಿ ಗ್ರಾಮದಲ್ಲಿ ರಾಮಾಲಯ ನಿರ್ಮಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಖಮ್ಮಂ ಜಿಲ್ಲೆಯ ರಘುನಾಥಪಾಲೆಂ ಮಂಡಲದ ಸರಪಂಚ್ ಶೇಖ್ ಮೀರಾ ಸಾಹೇಬ್ ರಾಮಾಲಯ ನಿರ್ಮಿಸಿ ಎಲ್ಲರಿಗೂ ಆದರ್ಶರಾಗಿದ್ದಾರೆ.

ಬೂಡಿದಂಪಾಡಿನಲ್ಲಿ ಒಂದು ಮರದ ಕೆಳಗೆ ಸೀತಾರಾಮರ ವಿಗ್ರಹಗಳಿದ್ದವು. ಶ್ರೀರಾಮನವಮಿಯಂದು ಚಪ್ಪರ ಹಾಕಿ ಕಲ್ಯಾಣ ಮಾಡುತ್ತಿದರೆ ವಿನಃ ದೇವಾಲಯ ನಿರ್ಮಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಊರಿಗೆ ಶೇಖ್ ಮೀರಾ ಸಾಹೇಬ ಅಧ್ಯಕ್ಷನಾದ ಬಳಿಕ ಆ ಊರಿನಲ್ಲಿ ತನ್ನ ಸ್ವಂತ ಹಣ ಹಾಗೂ ದೇಣಿಗೆ ಸಂಗ್ರಹಿಸಿ ದೇವಾಲಯ ನಿರ್ಮಾಣ ಮಾಡಿದ್ದಾರೆ.

ರಾಮಾಲಯ ನಿರ್ಮಾಣಕ್ಕೆ 50 ಲಕ್ಷ ರೂ ಖರ್ಚಾಗಿದ್ದು, ಈ ಮೊತ್ತದಲ್ಲಿ 25 ಲಕ್ಷವನ್ನು ಶೇಖ್ ಮೀರಾ ಸಾಹೇಬ ಭರಿಸಿದ್ದಾರೆ. ಗ್ರಾಮಸ್ಥರಿಂದ 25 ಲಕ್ಷ ರೂ. ಹಾಗೂ ದೇವಾಲಯ ನಿರ್ಮಾಣಕ್ಕೆ ಬೇಕಾದಂತಹ ಸ್ಥಳವನ್ನು ಮೂವರು ದಾನಿಗಳು ಸಾವಿರ ಗಜ ಭೂಮಿಯನ್ನು ದಾನ ಮಾಡಿದರು. ಎಲ್ಲರ ಸಹಾಯದೊಂದಿಗೆ ಶೇಖ್ ಮೀರಾ ಸಾಹೇವ್‌ ಆ ಊರಿನಲ್ಲಿ ಭವ್ಯವಾದ ರಾಮಾಲಯವನ್ನು ನಿರ್ಮಿಸಿ ಭಕ್ತರಿಗೆ ದರುಶನ ಭಾಗ್ಯ ಕಲ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!