ಶಹಜಾದ್- ರವೀಂದ್ರ ಎಂದು ಹೇಳಿಕೊಂಡು ಹಿಂದೂ ಹುಡುಗಿಯನ್ನು ಮದುವೆಯಾದ: ಬಳಿಕ ವರಸೆ ತೋರಿಸಿದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಸ್ಲಿಂ ವ್ಯಕ್ತಿಯೊಬ್ಬ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನು ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ. ಇದೀಗ ಆತನ ನಿಜಬಣ್ಣ ತಿಳಿದ ಯುವತಿ ಆಘಾತಕ್ಕೆ ಒಳಗಾಗಿದ್ದಾಳೆ.
ಯುವತಿಯ ಬಳಿ ತಾನು ರವೀಂದ್ರ ಎಂದು ಪರಿಚಯಿಸಿಕೊಂಡಿದ್ದ ಯುವಕ ಬಳಿಕ ಮದುವೆ ಪ್ರಸ್ತಾಪವಿಟ್ಟಿದ್ದಾನೆ.  ಆಬಳಿಕ ಅವರಿಬ್ಬರು ವಿವಾಹವಾಗಿದ್ದಾರೆ. ವಿವಾಹವಾಗಿ 6 ತಿಂಗಳು ಒಟ್ಟಿಗೆ ವಾಸಿಸಿದ್ದಾರೆ.
ಇತ್ತೀಚೆಗೆ ಆತನನ್ನು ಭೇಟಿಯಾಗಲು ಆತನು ಕೆಲಸ ಮಾಡುವ ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದಾಗ ಯುವತಿಗೆ ಸತ್ಯಾಂಶ ತಿಳಿದು ಆಘಾತವಾಗಿದೆ. ಆತ ರವೀಂದ್ರನಲ್ಲ, ಕಟ್ಟಡಕಾರ್ಮಿಕನಾಗಿ ಕೆಲಸ ಮಾಡುವ ಶಹಜಾದ್ ಅನ್ಸಾರಿ ಎಂಬ ವಿಚಾರ ತಿಳಿದುಬಂದಿದೆ.
ಸತ್ಯ ಹೊರಬಿದ್ದ ಬಳಿಕ ಶಹಜಾದ್ ಅನ್ಸಾರಿ ತಲೆಮರೆಸಿಕೊಂಡಿದ್ದಾನೆ. ಮಹಿಳೆ ನ್ಯಾಯಕ್ಕಾಗಿ ಕೋರ್ಟ್‌ ಮಟ್ಟಿಲೇರಿದ್ದಾಳೆ. ಸುಳ್ಳುಹೇಳಿ ಅಮಾಯಕ ಯುವತಿಗೆ ವಂಚಿಸಿದ ಶಹಜಾದ್‌ ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!