Saturday, August 13, 2022

Latest Posts

ಮುಸಲ್ಮಾನನ ಕಂಠದಲ್ಲಿ ಮೊಳಗಿತು ಶ್ರೀಕೃಷ್ಣನ ಮಹಾಭಾರತ್ ಗೀತೆ! ಇಲ್ಲಿದೆ ವೈರಲ್ ವಿಡಿಯೋ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಧಾರವಾಹಿಗಳ ಟೈಟಲ್ ಸಾಂಗ್ ಗಳು ಹೆಚ್ಚು ವೈರಲ್ ಆಗುತ್ತಿದ್ದುದ್ದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದಿಯ ಮಹಾಭಾರತ್ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಹಾಡುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಹೌದು. ಉಚ್ಛ ಕಂಠದಿಂದ ಧೈರ್ಯವಾಗಿ ಜಯಘೋಷಗಳೊಂದಿಗೆ ಈ ವ್ಯಕ್ತಿ ಮಹಾಭಾರತದ ಹಾಡನ್ನು ಹಾಡಿದ್ದಾರೆ. ಈ ವೀಡಿಯೋವನ್ನು ಭಾರತದ ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ಡಾ. ಎಸ್. ವೈ. ಖುರೋಷಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
90ರ ದಶಕದ ವಾರಾಂತ್ಯದಲ್ಲಿ ಈ ಧಾರಾವಾಹಿ ಟಿವಿಯಲ್ಲಿ ಬರುತ್ತಿತ್ತು. ಇವರ ಹಾಡುಗಾರಿಕೆಯಿಂದ ಈಗ ಜನರು ಮತ್ತೆ ತಮ್ಮ ಹಳೇ ನೆನಪುಗಳನ್ನು ಮೆಲುಕುಹಾಕುವಂತಾಗಿದೆ.
ಜಾತಿ, ಧರ್ಮ ಮರೆತು ಮನದಾಳದಿಂದ ಹಾಡಿದ ಶ್ರೀಕೃಷ್ಣನ ಹಾಡಿಗೆ ಎಲ್ಲರೂ ಫಿದಾ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss