ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಫ್ಯಾಮಿಲಿ ಕೋರ್ಟ್‌ಗೇ ಬರಬೇಕು: ಮದ್ರಾಸ್‌ ಹೈಕೋರ್ಟ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಚ್ಛೇದನ ಪಡೆಯುವುದಕ್ಕೆ ಮುಸ್ಲಿಂ ಮಹಿಳೆಯರು ಕೌಟುಂಬಿಕ ನ್ಯಾಯಾಲಯಗಳಿಗೇ (Family Courts) ತೆರಳಬೇಕು.ರಿಯತ್‌ ಕೌನ್ಸಿಲ್‌ಗಳಂತಹ ಖಾಸಗಿ ಸಂಸ್ಥೆಗಳಿಂದ ವಿಚ್ಛೇದನ ಪತ್ರ(ಖುಲಾ ಪತ್ರ) ಪಡೆದರೆ ಅದನ್ನು ಕಾನೂನು ಒಪ್ಪಿಕೊಳ್ಳುವುದಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ (Madras High court) ತೀರ್ಪು ನೀಡಿದೆ.

ಮುಸ್ಲಿಂ ವ್ಯಕ್ತಿಯೊಬ್ಬರ ಪತ್ನಿ 2017ರಲ್ಲಿ ಷರಿಯತ್‌ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದು, ಅದನ್ನು ರದ್ದುಗೊಳಿಸಬೇಕು ಎಂದುನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಮಾಡಿರುವ ನ್ಯಾಯಮೂರ್ತಿ ಸಿ. ಶಿವರಾಮನ್‌ ಅವನ್ನೊಳಗೊಂಡ ನ್ಯಾಯಾಲಯ , ಖುಲಾ ಪ್ರಮಾಣ ಪತ್ರಗಳು ಕಾನೂನಿನಲ್ಲಿ ಅಮಾನ್ಯ. ಹಾಗಾಗಿ ಈ ದಂಪತಿ ವಿವಾದಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಕುಟುಂಬ ನ್ಯಾಯಾಲಯ ಅಥವಾ ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯಿದೆ, 1975ರ ಅಡಿಯಲ್ಲಿ ಷರಿಯತ್‌ ಕೌನ್ಸಿಲ್‌ಗಳು ವಿಚ್ಛೇದನ ಪ್ರಮಾಣ ಪತ್ರ ನೀಡುವ ಅಧಿಕಾರ ಹೊಂದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!