Saturday, August 13, 2022

Latest Posts

ಏಪ್ರಿಲ್ 4ರಿಂದ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ: 50 ಸಾವಿರ ರೂ. ನಗದು ಬಹುಮಾನ

ಹೊಸದಿಗಂತ ವರದಿ, ಕೊಡಗು:

ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಪ್ರತೀ ವರ್ಷ ನಡೆಸಲಾಗುತ್ತಿರುವ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಏಪ್ರಿಲ್ 4ರಿಂದ 11ರವರೆಗೆ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಗೌರವಾಧ್ಯಕ್ಷ  ಕೆ.ಎಂ.ಅಬ್ದುಲ್ ರಶೀದ್ ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಲ್ಲಿ ಪ್ರಕೃತಿ ವಿಕೋಪ ಹಾಗೂ ಕೊರೋನಾದಿಂದಾಗಿ ಕ್ರೀಡಾಕೂಟ ನಡೆಸಲಾಗಿರಲಿಲ್ಲ. ಈ ಬಾರಿ 17ನೇ ವರ್ಷದ ಕ್ರೀಡಾಕೂಟವನ್ನು ಬೇತ್ರಿಯ ಎಸ್.ಇ.ಎಸ್.ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ ಎಂದು ನುಡಿದರು.

ಗೋಷ್ಠಿಯಲ್ಲಿ ಹಾಜರಿದ್ದ  ಎಸ್.ಇ.ಎಸ್. ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಸಮೀರ್ ಅವರು ಮಾತನಾಡಿ, ವಿವಿಧ ದಾನಿಗಳ ಸಹಕಾರದಲ್ಲಿ ಈ ಬಾರಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ಸುಮಾರು 80ಕ್ಕೂ ಅಧಿಕ ತಂಡಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿವೆ. ವಿಜೇತ ತಂಡಕ್ಕೆ ರೂ.50 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 25 ಸಾವಿರ ರೂ. ನಗದು ಹಾಗೂ ಪಾರಿತೋಷಕ ಮತ್ತು ಹಲವು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದು ವಿವರಿಸಿದರು.

ಸಮಾರೋಪ ಸಮಾರಂಭದಂದು ಸಾಮಾಜಿಕ, ರಾಜಕೀಯ, ಕ್ರೀಡಾ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ ಅವರು, ಹೆಚ್ಚಿನ ಮಾಹಿತಿಗೆ 9449694257, 9740658913, 9847562800 ಅಥವಾ 9843307801ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯ ಕೆ.ಸಿ.ಹಮೀದ್, ಎಸ್.ಇ.ಎಸ್. ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ಎಂ.ಎ.ಲತೀಫ್, ಸಹಕಾರ್ಯದರ್ಶಿ ಎಂ.ಕೆ.ಅಬ್ದುಲ್ ರಜಾಕ್, ಸದಸ್ಯ ಎನ್.ಪಿ.ಹಾರಿಸ್ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss