ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರವೀಗ ಭಾರತದಲ್ಲಿ-ಪ್ರಧಾನಿ ಮೋದಿ ಹೇಳಿದ್ದೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಂಕ್ರಾಮಿಕ ರೋಗವನ್ನು ಎದುರಿಸಲು ಅನೇಕ ದೇಶಗಳು ಸಾಂಪ್ರದಾಯಿಕ ಔಷಧದತ್ತ ಮುಖ ಮಾಡುತ್ತಿವೆ. ಜಾಗತಿಕವಾಗಿ ಆಯುರ್ವೇದ, ಸಿದ್ಧ, ಯುನಾನಿ ಸೂತ್ರೀಕರಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ (GCTM) ನಲ್ಲಿ ಸಾಂಪ್ರದಾಯಿಕ ಔಷಧದ ಪರೀಕ್ಷೆ ಮತ್ತು ಪ್ರಮಾಣೀಕರಣ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದರು.

ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ಮತ್ತು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಘೆಬ್ರೆಯೆಸಸ್ ಅವರ ಸಮ್ಮುಖದಲ್ಲಿ ಜಿಸಿಟಿಎಂನ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಮುಂದಿನ 25 ವರ್ಷಗಳಲ್ಲಿ ಭಾರತದ 100 ನೇ ಸ್ವಾತಂತ್ರ್ಯೋತ್ಸವ ವರ್ಷದೊಳಗೆ, ಪ್ರತಿ ಮನೆಯೂ ಸಾಂಪ್ರದಾಯಿಕ(ಆಯುರ್ವೇದ) ಔಷಧವನ್ನು ಅವಲಂಬಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

GCTM ಪ್ರಪಂಚದಾದ್ಯಂತ ಸಾಂಪ್ರದಾಯಿಕ ಔಷಧ ಪದ್ಧತಿಗಳ “ಜಾಗತಿಕ ರೆಪೊಸಿಟರಿ” ಸ್ಥಾಪಿಸಬೇಕು ಎಂದರು. ಇದು ಮುಂಬರುವ ಪೀಳಿಗೆಗೆ ಸಹಾಯ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸಾಂಪ್ರದಾಯಿಕ ಔಷಧ ಕೇಂದ್ರದೊಂದಿಗೆ ಪಾಲುದಾರಿಕೆಯನ್ನು ಸ್ಥಾಪಿಸಿದೆ. ಈ ನಡೆ ಭಾರತದ ಸಾಮರ್ಥ್ಯ ಮತ್ತು ಕೊಡುಗೆಗೆ ಸಿಕ್ಕ ಫಲವಾಗಿದೆ. ಭಾರತ ಇದನ್ನು ದೊಡ್ಡ ಜವಾಬ್ದಾರಿಯಾಗಿ ತೆಗೆದುಕೊಂಡು ವಿಶ್ವದ ಜನರಿಗೆ ಉತ್ತಮ ವೈದ್ಯಕೀಯ ಪರಿಹಾರಗಳನ್ನು ನೀಡಲು ಗಮನಹರಿಸುವುದಾಗಿ ಭರವಸೆ ನೀಡಿದ್ದಾರೆ.

“ಸಾಂಪ್ರದಾಯಿಕ ಔಷಧದ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ, GCTM ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು. ಈ ರೀತಿಯಲ್ಲಿ TM ಔಷಧಿಗಳ ಮೇಲಿನ ನಂಬಿಕೆಯು ಹೆಚ್ಚಾಗುತ್ತದೆ. ಭಾರತದ ಅನೇಕ ಟಿಎಂ ಔಷಧಗಳು ಮತ್ತು ಉತ್ಪನ್ನಗಳು ವಿದೇಶಿಯರಲ್ಲಿ ಪ್ರಭಾವ ಬೀರುವುದನ್ನು ನಾವು ನೋಡುತ್ತೇವೆ. ಆದರೆ ಅಂತರರಾಷ್ಟ್ರೀಯ ಮಾನದಂಡಗಳ ಕೊರತೆಯಿಂದಾಗಿ ನಿಯಮಿತ ವ್ಯಾಪಾರಕ್ಕೆ ಸೀಮಿತವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!