MUST READ | ಭಾರತದ ರಾಷ್ಟ್ರಪತಿಗಳ ಕಾರಿಗೆ ನಂಬರ್ ಪ್ಲೇಟ್ ಇಲ್ಲ ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರಸ್ತೆಗಳಲ್ಲಿ ಓಡಾಡುವ ಪ್ರತೀ ವಾಹನಗಳಿಗೆ ನೋಂದಣಿ ಸಂಖ್ಯೆ ಇರಬೇಕಾದ್ದು ಕಡ್ಡಾಯ. ಆದರೆ ರಾಷ್ಟ್ರಪತಿಗಳು ಸಂಚರಿಸುವ ವಾಹನಕ್ಕೆ ಮಾತ್ರ ನೋಂದಣಿ ಸಂಖ್ಯೆ ಇಲ್ಲ.
ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು ಸಮಯ, ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾರುಗಳನ್ನು ಬದಲಿಸಿಕೊಳ್ಳುತ್ತಾರೆ. ರಾಷ್ಟ್ರಪತಿಗಳ ಕಾರು ತಯಾರಿಕೆ, ಮಾದರಿ ಮತ್ತು ನೋಂದಣಿ ಸಂಖ್ಯೆಗಳನ್ನು ಬಹಿರಂಗಪಡಿಸುವುದು ಮೊದಲ ಪ್ರಜೆಯ ಭದ್ರತೆಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನೀಡಲಾಗುತ್ತದೆ. ಗೃಹ ಸಚಿವಾಲಯವು ಇದನ್ನು ಗೌಪ್ಯವಾಗಿರಿಸುತ್ತದೆ. ಈ ಕಾರುಗಳು ಪರವಾನಗಿ ನಂಬರ್ ಪ್ಲೇಟ್ ಹೊಂದಿರುವುದಿಲ್ಲ. ಸಂಖ್ಯೆಗಳ ಬದಲಿಗೆ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭವನ್ನು ಪ್ರದರ್ಶಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!