Sunday, April 18, 2021

Latest Posts

ಕೆಲಸ ಬಿಟ್ಟು ಊರೂರು ಸುತ್ತುತ್ತಿರುವ ಪ್ರವಾಸ ಪ್ರಿಯ ಜೋಡಿ.. ಇವರ ಧೈರ್ಯಕ್ಕೆ ನೆಟ್ಟಿಗರು ಫಿದಾ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತಿಂಗಳಾನುಗಟ್ಟಲೆ ರೋಡ್ ಟ್ರಿಪ್ ಮಾಡಬೇಕು, ಈ ಬ್ಯುಸಿ ಜೀವನವನ್ನ ಮರೆತೇ ಹೋಗಬೇಕು ಅಂತ ಎಷ್ಟು ಮಂದಿಗೆ ಅನಿಸಿದೆ?
ಬರೀ ಅನಿಸೋದಲ್ಲ, ಸುದೀರ್ಘ ಟ್ರಿಪ್‌ಗಾಗಿ ಕೆಲಸ ಬಿಟ್ಟು ಕಾರ್ ಹತ್ತಿ ಹೊರಡೋದು ಸಾಧ್ಯಾನಾ? ನಮಗೆ ಸಾಧ್ಯ ಇಲ್ಲ ಎನಿಸಬಹುದು. ಆದರೆ ಇದೆಲ್ಲಾ ಮನಸ್ಸು ಮಾಡಿದರೆ ಸಾಧ್ಯ ಎಂದು ತೋರಿಸಿದ್ದಾರೆ ಕೇರಳದ ಜೋಡಿ!
ಕೇರಳದ ತ್ರಿಶ್ಮೂರು ಮೂಲದ ಹರಿಕೃಷ್ಣನ್ ಹಾಗೂ ಲಕ್ಷ್ಮಿ ದೇಶ ಸುತ್ತೋಕೆ ಹೊರಟೇ ಬಿಟ್ಟಿದ್ದಾರೆ. ಇದಕ್ಕೆ ಕೆಲಸ ಅಡ್ಡಿಯಾಗಿದೆ ಎಂದು ಕೆಲಸವನ್ನೇ ತೊರೆದಿದ್ದಾರೆ.

ಕೆಲಸ ಮನೆ ಬಿಟ್ಟು ಟ್ರಿಪ್ ಮಾಡ್ತೀವಿ ಅಂದರೆ ಮನೆಯವರು ತಲೆ ಕೆಟ್ಟಿದೆಯಾ ಎನ್ನುವ ರೀತಿಯ ಪ್ರತಿಕ್ರಿಯೆ ನೀಡ್ತಾರೆ. ಆದರೆ ಇವರ ಮನೆಯವರು ಟ್ರಿಪ್ ಹೋಗೋಕೆ ಸಹಾಯ ಮಾಡಿದ್ದಾರೆ. ನಾವಂತೂ ಮಾಡಲಿಲ್ಲ ನೀವಾದರೂ ಮಾಡಿ ಎಂದಿದ್ದಾರೆ.
TinPin Stories of a Kerala Couple who turned their car into a travelling  home - Social Ketchupಕಾರಿನ ಹಿಂಬದಿ ಸೀಟ್‌ನಲ್ಲಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಡಿಕ್ಕಿಯಲ್ಲಿ ನೀರಿನ ಬಾಟಲಿ,ಬರ್ನ್‌ರ್ ಸ್ಟೊವ್, ಅಡುಗೆಗೆ ಬೇಕಾದ ವಸ್ತುಗಳು ಇವೆ. ಇದಕ್ಕೆ 2.5ಲಕ್ಷ ರೂ. ವ್ಯಯಿಸಿದ್ದಾರೆ.
ಕೊರೋನಾದಿಂದ ಸಂಚಾರದ ಮೇಲೆ ನಿರ್ಬಂಧ ಇದ್ದು, ನಿರ್ಬಂಧ ಸಡಿಲಗೊಳಿಸಿದ ತಕ್ಷಣ ಟ್ರಿಪ್ ಹೊರಟಿದ್ದಾರೆ. ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ನೋಡಿ ಆಗಿದೆ. ಇದೀಗ ಜಮ್ಮು, ಗುಜರಾತ್, ರಾಜಸ್ಥಾನ ನೋಡುತ್ತಿದ್ದಾರೆ. 150 ದಿನಗಳಿಂದ ಪ್ರವಾಸ ಮಾಡುತ್ತಿರುವ ಇವರ ಜೀವನಾಸಕ್ತಿ ಮೆಚ್ಚಲೇಬೇಕು!

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss