ಗುಜರಾತ್‌ ವಿರುದ್ಧ ಹೀನಾಯ ಸೋಲುಂಡ ಸನ್‌ ʼರೈಸರ್ಸ್‌; ಡಗ್‌ ಔಟ್‌ ನಲ್ಲೇ ‌ʼರೈಸ್‌ʼ ಆದ ಮುರುಳೀಧರನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನ 2014 ರ ಆವೃತ್ತಿಯಲ್ಲಿ, ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ಕೊನೆ ಎಸೆತದಲ್ಲಿ ಸಿಕ್ಕರ್‌ ಹೊಡೆಸಿಕೊಂಡು ಸೋಲನ್ನಪ್ಪಿತ್ತು. ಆಗ ತಂಡದ ಮೆಂಟರ್‌ ಆಗಿದ್ದ ರಾಹುಲ್ ದ್ರಾವಿಡ್ ತಮ್ಮ ಕ್ಯಾಪ್ ಅನ್ನು ಹತಾಶೆ ಎಸೆದು ಡಗ್‌ ಔಟ್‌ ತೊರೆದಿದ್ದರು. ಅತ್ಯಂತ ಶಾಂತ ,ಮೂರ್ತಿಗಳಲ್ಲಿ ಒಬ್ಬರಾದ ದ್ರಾವಿಡ್ ಗ್ರಾವಿಡ್‌ ʼಆಂಗ್ರಿಮನ್‌ʼ ಅವತಾರಕ್ಕೆ ವೀಕ್ಷಕರು ಚಕಿತರಾಗಿದ್ದರು. ದ್ರಾವಿಡ್‌ ಸಿಟ್ಟು ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅದಾಗಿ ಎಂಟು ವರ್ಷಗಳ ಬಳಿಕ ಅಂತಹದ್ದೇ ಇತಿಹಾಸವೊಂದು ಬುಧವಾರ ರಾತ್ರಿ ಪುನರಾವರ್ತನೆಯಾಯಿತು.
ಆದರೆ ಈ ಈ ಬಾರಿ ಕೊಪಗೊಂಡು ಸುದ್ದಿಯಲ್ಲಿರುವುದು ಶ್ರೀಲಂಕಾದ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್!. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. ಎಸ್‌ ಆರ್‌ಎಚ್‌ ನೀಡಿದ್ದ 195ರನ್‌ ಗುರಿ ಬೆನ್ನತ್ತಿದ್ದ ಗುಜರಾತ್‌ ಗೆ ಪಂದ್ಯವನ್ನು ಗೆಲ್ಲಲು ಅಂತಿಮ ಓವರ್‌ನಲ್ಲಿ 22 ರನ್‌ಗಳ ಅಗತ್ಯವಿತ್ತು. ಕ್ರೀಸ್‌ ನಲ್ಲಿದ್ದ ರಶೀದ್ ಖಾನ್ ಮತ್ತು ರಾಹುಲ್ ತೆವಾಟಿಯಾ ಜೋಡಿಯು ಸಿಕ್ಸರ್‌ ಮೇಲೆ ಸಿಕ್ಸರ್‌ ಹೊಡೆದು ಯುವ ವೇಗಿ ಮಾರ್ಕೋ ಜಾನ್ಸನ್‌ ರನ್ನು ಕಂಗಾಲಾಗಿಸಿದರು. ಪಂದ್ಯ ಎಸೆತದಿಂದ ಎಸೆತಕ್ಕೆ ಎರಡೂ ತಂಡಗಳ ಕೈ ಬದಲಾಯಿಸುತ್ತಿತ್ತು. ಕೊನೆಯ ಎರಡು ಎಸೆತದಲ್ಲಿ ಗುಜರಾತ್‌ ಗೆಲ್ಲಲು 9 ರನ್‌ ಅಗತ್ಯವಿತ್ತು. ಐದನೇ ಎಸೆತವನ್ನು ರಶೀದ್‌ ಖಾನ್‌ ಸಿಕ್ಸರ್‌ ಗಟ್ಟಿದರು. ಡಗ್‌ ಔಟ್‌ ನಲ್ಲಿ ಕುಳಿತಿದ್ದ ಮುರಳೀಧರನ್ ಕೋಪದಿಂದ ತಮ್ಮ ಸೀಟಿನಿಂದ ಎದ್ದುನಿಂತು ಈ ಸಮಯದಲ್ಲಿ ಫುಲ್‌ ಲೆಂಗ್ತ್‌ ಎಸೆತ ಎಸೆಯಬೇಕಿತ್ತಾ ಎಂದು ಜಾನ್ಸೆನ್‌ ಬೌಲಿಂಗ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಂತ ಶಾಂತಚಿತ್ತತೆಗೆ ಹೆಸರಾದ ಮುರುಳೀಧರನ್‌ ರೌದ್ರಾವತಾಕ್ಕೆ ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ.

 

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಅಭಿಮಾನಿಗಳು ತರಹೇವಾರಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಮುರುಳೀಧರನ್‌ ರಂತಹ ಲೆಜೆಂಡ್‌ ಗಳೇ ತಾಳ್ಮೆ ಕಳೆದುಕೊಳ್ಳುತ್ತಾರೆಂದರೆ ಐಪಿಎಲ್‌ ಪಂದ್ಯಗಳು ರೋಮಾಂಚಕತೆಯ ಗರಿಷ್ಠಮಟ್ಟಕ್ಕೆ ತಲುಪಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದು ಕೆಲವರು ಹೇಳಿದರೆ, ಇಂದೊಂದು ಅಪರೂಪದಲ್ಲಿ ಅಪರೂಪದ ದೃಶ್ಯ. ಅಭಿಮಾನಿಗಳು ಜೀವಮಾನದಲ್ಲಿ ಒಮ್ಮೆ ಮಾತ್ರವೇ ನೋಡಲು ಸಾದ್ಯವಿರುವ ದೃಶ್ಯ ಎಂದು ಕೆಲವರು ಕಾಲೆಳೆದಿದ್ದಾರೆ. ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್‌ ಸಿಡಿಸಿದ ಟೈಟಾನ್ಸ್‌ ರೋಮಾಂಚಕ ಜಯವನ್ನು ಗಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!