ನನ್ನ ಅಪ್ಪ ಜಗತ್ತಿನಲ್ಲಿಯೇ ಸೇಫ್ ಡ್ರೈವರ್: ನಟಿ ರಾಧಿಕಾ ಪಂಡಿತ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಧಿಕಾ ಪಂಡಿತ್‌ ಸಿನಿಮಾದಿಂದ ದೂರ ಉಳಿದಿದ್ದರೂ ಆಗಾಗ ಪೋಸ್ಟ್‌ ಮಾಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈ ಬಾರಿ ತಮ್ಮ ತಂದೆಯ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಮಕ್ಕಳು ಅಜ್ಜನ ಸ್ಕೂಟರ್‌ ಅನ್ನು ಹತ್ತಿ ರೈಡ್ ಹೊರಟಿದ್ದಾರೆ. ಅವರಿಗೆ ರಾಧಿಕಾ ಕೂಡ ಸಾಥ್ ನೀಡಿದ್ದಾರೆ.

‘ನನ್ನ ಪಪ್ಪಾ ವಿಶ್ವದ ಅತ್ಯಂತ ಸುರಕ್ಷಿತ ಚಾಲಕ. ಅವರು ಡ್ರೈವಿಂಗ್‌ ಮಾಡುವಾಗ ಅಕ್ಷರಶಃ ಚಿಕ್ಕನಿದ್ರೆ ಮಾಡಬಹುದು! ಅವರು ನನ್ನ ಇಡೀ ಜೀವನದಲ್ಲಿ ಶಾಲೆಯಿಂದ ಮತ್ತು ಕಾಲೇಜಿನರೆಗೂ ಬೈಕ್‌ನಲ್ಲಿ ಡ್ರಾಪ್‌ ಕೊಡುತ್ತಿದ್ದರು. ನಾನು ತರಗತಿಗೆ ಬಂಕ್ ಮಾಡಿದರೂ ಅವರೇ ಯಾವಾಗಲೂ ನನ್ನ ಸವಾರಿʼʼ ಎಂದು ಬರೆದುಕೊಂಡಿದ್ದಾರೆ.

ಈ ಕ್ಯೂಟ್‌ ಪೋಸ್ಟ್‌ಗೆ ಕಮೆಂಟ್‌ ಮೂಲಕ ರಾಧಿಕಾ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!