Wednesday, June 29, 2022

Latest Posts

ನನ್ನ ಗೆಲವು ನೂರಕ್ಕೆ ನೂರರಷ್ಟು ಖಚಿತ: ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ವಿಶ್ವಾಸ

ದಿಗಂತ ವರದಿ ವಿಜಯಪುರ:

ಅವಳಿ ಜಿಲ್ಲೆ ವಿಜಯಪುರ- ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಗೆಲವು ನೂರಕ್ಕೆ ನೂರರಷ್ಟು ಖಚಿತ ಎಂದು ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡೂ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ನಾಡಿಕೊಂಡು ಅವಿರೋಧ ಆಯ್ಕೆಗೆ ಕಸರತ್ತು ನಡೆಸಿದ್ದವು, ಹೀಗಾಗಿ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯ ಮತದಾರ ಸ್ವಾಭಿಮಾನದ ಹಿನ್ನೆಲೆ, ಸದಸ್ಯರ ಅಭಿಪ್ರಾಯ, ಒಪ್ಪಿಗೆ ಪಡೆದು ನಾನು ಚುನಾವಣೆಗೆ ಸ್ಪರ್ಧಿಸಿರುವೆ. ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸಬೇಕು ಎಂದು ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ನನ್ನ ಸಾಧನೆ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸ್ಥಳೀಯ ಸಂಘ ಸಂಸ್ಥೆಗಳ ಕುಂದು ಕೊರತೆ ಅರಿತಿಲ್ಲ. ಎಂಎಲ್ ಸಿ ಕಾರ್ಡ್ ಅನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ನಲ್ಲಿ ಸಾಮಾಜಿಕ ನ್ಯಾಯ ಕಗ್ಗೊಲೆ ಆಗಿದೆ. ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು‌.

ಸ್ಥಳೀಯ ಸಂಸ್ಥೆಗಳನ್ನು ಗಟ್ಟಿ ಗೊಳಿಸುವಲ್ಲಿ ನಿಟ್ಟಿನಲ್ಲಿ ನಾನು ಚುನಾವಣೆ ಸ್ಪರ್ಧಿಸಿರುವೆ, ಸದಸ್ಯರು ನೀಡಿರುವ ಬೆಂಬಲಕ್ಕೆ ಅವರು ಬದ್ದರಾಗಿದ್ದು, ನನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಅಲ್ಲದೆ ವಿಧಾನ ಪರಿಷತ್ ಚುನಾವಣೆ ವೇಳೆ ಮತದಾನ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಮತ್ತು ಮತದಾನ ಸಂದರ್ಭ ಅಂಧರು ಮತ್ತು ವಿಶೇಷಚೇತನರ ಮತದಾನ ದುರುಪಯೋಗ ಆಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಂ.ಎಚ್. ಪಠಾಣ, ಸತೀಶ ಸಜ್ಜನ, ನಿಂಗಪ್ಪ ಕೊಂಡಗೂಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss