ಹೊಸದಿಗಂತ ಆನ್ಲೈನ್ ಡೆಸ್ಕ್:
ಅತ್ತೆ ಸೊಸೆ ಜಗಳ ಕಾಮನ್ ಆದರೆ ಅತ್ತೆ ಟಿವಿ ನೋಡ್ತಾರೆ ನನಗೆ ಊಟ ಕೊಡೋದಿಲ್ಲ ಎಂದು ಸೊಸೆಯೊಬ್ಬಳು ಪೊಲೀಸರಿಗೆ ದೂರಿದ್ದಾಳೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಈ ಘಟನೆ ನಡೆದಿದೆ. ನವವಿವಾಹಿತೆಯೊಬ್ಬರು ತನ್ನ ಅತ್ತೆ ಮೂರು ಹೊತ್ತು ಅಡುಗೆ ಮಾಡುವುದಿಲ್ಲ. ನೆನ್ನೆ ಮೊನ್ನೆಯ ಊಟ ಹಾಕುತ್ತಾರೆ. ಇದರಿಂದ ನನ್ನ ಆರೋಗ್ಯ ಹಾಳಾಗುತ್ತಿದೆ ಎಂದು ದೂರಿದ್ದಾಳೆ.
ಮನೆಯಿಂದಲೇ 112ಗೆ ಕರೆ ಮಾಡಿ ಪೊಲೀಸರನ್ನು ಕರೆಸಿದ್ದು, ನನ್ನ ಅತ್ತೆಗೆ ಟಿವಿ ಹುಚ್ಚು. ಇದರಿಂದಾಗಿ ಅಡುಗೆ ಮನೆಗೆ ಹೋಗೋದಿಲ್ಲ ಎಂದಿದ್ದಾರೆ. ಅತ್ತೆ ಇದಕ್ಕೆ ಪ್ರತಿಕ್ರಿಯೆ ನೀಡಿ, ನಾನು ಇದನ್ನು ಒಪ್ಪುವುದಿಲ್ಲ ನನ್ನ ಸೊಸೆ ಅಡುಗೆ ಮನೆಗೆ ಹೋಗುವುದಿಲ್ಲ. ಮೂರು ಹೊತ್ತು ಮೊಬೈಲ್ನಲ್ಲಿ ಮುಳುಗಿರುತ್ತಾಳೆ ಎಂದು ದೂರಿದ್ದಾರೆ. ಮನೆಯಲ್ಲಿ ಯಾರೂ ಗಂಡಸರು ಇಲ್ಲ. ಎಲ್ಲರೂ ಕೆಲಸದ ಮೇಲೆ ಬೇರೆ ಊರಿನಲ್ಲಿ ಇದ್ದಾರೆ. ಅತ್ತೆ ಸೊಸೆ ಪ್ರತಿದಿನ ಜಗಳ ಆಡುತ್ತಾರೆ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ. ಇನ್ನು ಮುಂದೆ ಜಗಳವಾಡದೇ ಅನ್ಯೂನ್ಯವಾಗಿರಿ ಎಂದು ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ.