spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊನೆ ಕ್ಷಣದಲ್ಲಿ ನನ್ನ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದೆ : ಎಸ್.ಎ.ರಾಮದಾಸ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು:

ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಪೋಸ್ಟ್ ಮಾಟಂ ಮಾಡುವುದಿಲ್ಲ. ನನಗೆ ಹೆಣ ಕೊಯ್ಯುವುದರಲ್ಲಿ ಆಸಕ್ತಿ ಇಲ್ಲ.ರಾಜ್ಯಕ್ಕೆ ಏನೂ ಕೆಲಸ ಮಾಡಬೇಕೆಂದು ಕನಸು ಇಟ್ಟುಕೊಂಡಿದ್ದೆ. ಅದನ್ನು ಈಗ ಕೆ.ಆರ್. ಕ್ಷೇತ್ರಕ್ಕೆ ಮಾಡುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನನ್ನ ಹೆಸರು ಪಟ್ಟಿಯಲಿದೆ ಅಂತಾ ನನಗೆ ಹೇಳಿದ್ದರು. ನಿನ್ನಂಥವನೂ ಮಂತ್ರಿ ಆಗಬೇಕು. ಅದಕ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ ಎಂದು ಹೇಳಿದರು. ನಿನ್ನೆ ರಾತ್ರಿ ನನಗೆ ಬಹಳ ಜನ ಅಭಿನಂದಿಸುತ್ತಿದ್ದರು. ನನಗೆ ದೆಹಲಿಯ ನಾಯಕರು, ಸ್ವಾಮೀಜಿಗಳು ಅಭಿನಂದನೆ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ನನ್ನ ಹೆಸರು ಸಚಿವರ ಪಟ್ಟಿಯಲ್ಲಿ ಡಿಲೀಟ್ ಆಗಿದೆ. ಬೆಳಗ್ಗೆ ಆಗುವವರೆಗೆ ಎಲ್ಲವೂ ಬದಲಾಗಿದೆ.
ಇದು ದುಃಖದ ದಿನವಲ್ಲ. ಸವಾಲಿನ ದಿನವಾಗಿ ಸ್ವೀಕರಿಸಿ ಪಕ್ಷವನ್ನು ಸಂಘಟಿಸುತ್ತೇನೆ. ನಾನು ನೋವಿನಲ್ಲಿ ಇಲ್ಲ. ಮಂತ್ರಿಯ ಸ್ಥಾನ ಇಲ್ಲದಿದ್ದರು ಕೆಲಸ ಮಾಡುತ್ತೇನೆ ಎಂದರು.
ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ನಾನು ಮೆರಿಟ್ ವಿದ್ಯಾರ್ಥಿ. ನನ್ನದ್ದು ಮಿಲಿಟರಿ ಜಾತಿ. ನಾನು ಜನಿವಾರ ಮತ್ತೊಂದು ಚಿಂತೆ ಮಾಡುವವನಲ್ಲ
ನನ್ನ ಅನುಭವದ ಆಧಾರದ ಮೇಲೆ ಕೆ ಆರ್ ಕ್ಷೇತ್ರವನ್ನು ಇಡೀ ದೇಶದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಪೇಜ್ ಪ್ರಮುಖ್ ಯೋಜನೆ ಮೂಲಕ 15 ಸಾವಿರ ಪೇಜ್ ಪ್ರಮುಖರನ್ನು ನೇಮಿಸುತ್ತೇವೆ. ಈ ಮೂಲಕ ರಾಷ್ಟç ನಾಯಕರನ್ನು ಮೈಸೂರಿಗೆ ಕರೆಯಿಸಿ ಕಾರ್ಯಕ್ರಮ ಆಯೋಜನೆ ಮಾಡುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss