ಹೊಸದಿಗಂತ ವರದಿ, ವಿಜಯಪುರ:
ನನ್ನ ಫೋನ್ ಟ್ಯಾಪ್ ಆಗಿಲ್ಲ, ಫೋನ್ ಸಿಡಿಆರ್ ಆಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿಆರ್ ತೆಗೆಯುವ ಕೆಲಸ ಕೆಲವರು ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಸಿಡಿಆರ್ ತೆಗೆಯುವ ಚಾಳಿ ಇದೆ ಎಂದು ದೂರಿದರು.
ಆದರೆ, ಯಾರ ಹೆಸರು ಹೇಳೋದಿಲ್ಲ. ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಆದರೆ, ಸರ್ಕಾರ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ. ಇದು ಅನುಮಾನ ಅಲ್ಲ, ಪಕ್ಕಾ ಮಾಹಿತಿ ಇದೆ.
ಚುನಾವಣೆಯಲ್ಲಿ ಖಾಸಗಿ ಮಾಹಿತಿ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ವಿಶ್ವಾಸಾರ್ಹ ತಿಳಿದುಕೊಂಡು ಪತ್ರ ಬರೆದಿದ್ದೇನೆ ಎಂದರು.
ಕೆಲವೊಂದು ಅಧಿಕಾರಿಗಳು ಆಮಿಷಕ್ಕಾಗಿ ಸಿಡಿಆರ್ ಕೊಡುವವರು ಇರ್ತಾರೆ. ಅದಕ್ಕಾಗಿ ಬಿಜೆಪಿ, ಸಾಮಾನ್ಯ ಜನರುದ್ದು ಸಿಡಿಆರ್ ತೆಗೆಯುವುದು ಆಗಬಾರದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಮತಕ್ಷೇತ್ರದಲ್ಲಿ ನಿಂತರು ಗೆಲುತ್ತಾರೆ. ಬಾದಾಮಿ, ಕೊಲ್ಹಾರ, ವರುಣಾದಲ್ಲಿ ನಿಂತರು ಗೆಲುತ್ತಾರೆ. ಅಲ್ಲದೇ,
40 ಸಾವಿರ ಮತದಿಂದ ಗೆಲುತ್ತಾರೆ. ಅವರಲ್ಲಿ ಅಂತಹ ಶಕ್ತಿ ಇದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮಧ್ಯ ಆಗಿರುವ ಮಾತುಕತೆ ಗೊತ್ತಿಲ್ಲ ಎಂದರು.
ಇನ್ನೂ ಯುಗಾದಿ ದಿನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುತ್ತದೆ. ಯುಗಾದಿಗೆ ಸಿಹಿ ಸುದ್ದಿ ನೀಡುತ್ತೇವೆ ಎಂದರು.