Friday, August 19, 2022

Latest Posts

ಸಿಇಟಿ ಪರೀಕ್ಷೆಯಲ್ಲಿ ಮೈಸೂರಿನ ಮೇಘನ್ ಎಚ್.ಕೆ. ರಾಜ್ಯಕ್ಕೆ ಪ್ರಥಮ

ಹೊಸ ದಿಗಂತ ವರದಿ, ಮೈಸೂರು:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಪ್ರಮತಿ ಹಿಲ್ ವೀವ್ ಅಕಾಡೆಮಿಯ ಮೇಘನ್ ಎಚ್.ಕೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿoಗ್, ಬಿ-ಫಾರ್ಮಾ, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿಯಲ್ಲಿ ವಿಭಾಗದಲ್ಲೂ
ಮೇಘನ್ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಮೇಘನ್ ಸಿಬಿಎಸ್‌ಇನಲ್ಲಿ 500 ಅಂಕಗಳಿಗೆ 494 ಅಂಕ ಗಳಿಸಿದ್ದಾರೆ. ತಂದೆ ಕೃಷ್ಣಯ್ಯ ಅವರು ಕೆ.ಆರ್.ನಗರದಲ್ಲಿ ಮತ್ತು ತಾಯಿ ಲೀಲಾವತಿ ರಾಮಕೃಷ್ಣನಗರದ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!