ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮೈಸೂರು:
ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಜೂನ್ 11 ರಂದು ನಡೆಯಲಿದ್ದ ಚುನಾವಣೆಗೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತಂದಿರುವ ನಗರಪಾಲಿಕೆಯ ಕಾಂಗ್ರೆಸ್ ಸದಸ್ಯ ಪ್ರದೀಪ್ ಚಂದ್ರ ಅವರಿಗೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವುದಕ್ಕೆ ಕಾರಣ ಕೇಳಿ ಪಕ್ಷದ ನಗರಾಧ್ಯಕ್ಷ ಆರ್.ಮೂರ್ತಿ ನೋಟಿಸ್ ನೀಡಿದ್ದಾರೆ.
ಪಾಲಿಕೆಯ ಮೇಯರ್ ಚುನಾವಣೆಗೆ ಸಂಬAಧಿಸಿದAತೆ ಪಕ್ಷದ ವಿಪ್ನ್ನು ನೀವು ಸ್ವೀಕರಿಸಿ, ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗುವುದಾಗಿ ಹೇಳಿದ್ದೀರಿ. ಆದರೆ, ಹೈಕೋರ್ಟ್ನಿಂದ ನಗರಪಾಲಿಕೆಯ ಮೇಯರ್ ಚುನಾವಣೆಗೆ ಕೋವಿಡ್ ನಿಯಮ ಉಲ್ಲಂಘನೆಯ ನೆಪ ಹೇಳಿ ತಡೆಯಾಜ್ಞೆ ತಂದಿದ್ದೀರಿ. ಇದು ಪಕ್ಷದ ಮುಖಂಡರು, ಹೈಕಮಾಂಡ್ಗೆ ಆಘಾತಕಾರಿ ವಿಷಯವಾಗಿದ್ದು, ಪಕ್ಷಕ್ಕೆ ಭಾರೀ ಮುಜುಗರ ಉಂಟಾಗಿದೆ ಎಂದು ನೋಟಿಸ್ನಲ್ಲಿ ಆರ್.ಮೂರ್ತಿ ಅವರು ನಗರಪಾಲಿಕೆಯ ಪಕ್ಷದ ಸದಸ್ಯ ಪ್ರದೀಪ್ ಚಂದ್ರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದೀರಿ ಎಂದು ಭಾವಿಸಿ, ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸುವ ಸಂಬAಧ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಜಾರಿಯಾದ 3 ದಿನದೊಳಗೆ ನಿಮ್ಮ ಸಮಜಾಯಿಸಿ ನೀಡಬೇಕು ಎಂದು ಸೂಚಿಸಿದ್ದಾರೆ.