ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೆಲಸದ ಸ್ಥಳದಲ್ಲೇ ಉದ್ಯೋಗಿಗಳಿಗೆ ಲಸಿಕಾ ನೀಡಿಕೆ: ಮೈಸೂರು ರೈಲ್ವೆ ವಿಭಾಗ

ಹೊಸ ದಿಗಂತ ವರದಿ ಮೈಸೂರು:

ದೇಶಾದ್ಯಂತ ಹೆಚ್ಚಿನ ಗತಿಯಲ್ಲಿ ಕೋವಿಡ್ ಪ್ರಕರಣಗಳು ಏರುತ್ತಿರುವ ಹಿನ್ನಲೆಯಲ್ಲಿ ನೈಋತ್ಯ ಮೈಸೂರು ರೈಲ್ವೆ ವಿಭಾಗವು ಕೆಲಸದ ಸ್ಥಳದಲ್ಲಿಯೇ ತನ್ನ ನೌಕರರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ಶುಕ್ರವಾರ ಪ್ರಾರಂಭಿಸಿತು.

ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ 45 ವರ್ಷ ಹಾಗು ಅದಕ್ಕಿಂತ ಹೆಚ್ಚಿನ ವಯಸ್ಸಿನ ಉದ್ಯೋಗಿಗಳಿಗೆ ಮತ್ತು ಹೆಚ್ಚಿನ ಅಪಾಯದ ಅಡಿಯಲ್ಲಿ ಬರುವ ಅರ್ಹ ಮುಂಚೂಣಿ ಉದ್ಯೋಗಿಗಳ ಫಲಾನುಭವಿಗಳಿಗೆ, ವಯಸ್ಸಿನ ಪರಿಗಹಣೆಯಿಲ್ಲದೆ, ಕೆಲಸದ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಇಂದು ಪ್ರಾರಂಭಿಸಿತು.

ಲಸಿಕೆ ನೀಡುವ ಮೊದಲು ಎಲ್ಲಾ ಉದ್ಯೋಗಿಗಳನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲಾಗುತ್ತಿದೆ ಮತ್ತು ಲಸಿಕಾ ಸ್ಥಳದಲ್ಲಿ ಎಲ್ಲಾ ಕೋವಿಡ್ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆ. ಇದೇ ರೀತಿಯ ಲಸಿಕಾ ಕಾರ್ಯಕ್ರಮಗಳನ್ನು ಇತರೆ ಪ್ರಮುಖ ಕೆಲಸದ ಸ್ಥಳಗಳಲ್ಲಿ ಮತ್ತು ಶಿವಮೊಗ್ಗ, ಹರಿಹರ, ಅರಸೀಕೆರೆ, ಸಕಲೇಶಪುರ ಮುಂತಾದ ರೈಲ್ವೆ ನಿಲ್ದಾಣಗಳಲ್ಲಿ ಸಹ ನಡೆಸಲಾಗುತ್ತಿದೆ ಎಂದು ಮೈಸೂರಿನ ರೈಲ್ವೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್.ರಾಮಚಂದ್ರ ತಿಳಿಸಿದರು.

ಮೈಸೂರು ವಿಭಾಗವು ಅರ್ಹ ಉದ್ಯೋಗಿಗಳಿಗೆ, ಮುಂಚೂಣಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕೊಮೊರ್ಬಿಡಿಟಿ ಇರುವ ನಿವೃತ್ತ ನೌಕರರು ಹಾಗು ಅವರ ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರು ಸೇರಿದಂತೆ ಒಟ್ಟು 2419 ಪ್ರಮಾಣಗಳಷ್ಟು ಲಸಿಕೆಯನ್ನು ನೀಡಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss