ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸ ದಿಗಂತ ವರದಿ,ಮೈಸೂರು:
ಹಾಡಹಗಲೇ ಚಿನ್ನಾಭರಣ ಮಾರಾಟ ಅಂಗಡಿಯೊAದಕ್ಕೆ ನುಗ್ಗಿ ದ ನಾಲ್ವರಿದ್ದ ದರೋಡೆಕೋರರ ತಂಡ, ಪಿಸ್ತೂಲ್ ತೋರಿಸಿ,ಬೆದರಿಕೆ ಹಾಕಿ, ಅಂಗಡಿ ಮಾಲೀಕನ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟಿ ತುರುಕಿ, ಚಿನ್ನಾಭರಣ ದೋಚಿ ಪರಾರಿಯಾಗುವ ವೇಳೆ ಎದುರಿಗೆ ಬಂದು ಪ್ರತಿರೋಧ ತೋರಿದವರ ಮೇಲೆ ಗುಂಡು ಹಾರಿಸಿ, ಅಮಾಯಕನ ಹತ್ಯೆ ಮಾಡಿ ಪರಾರಿಯಾದ ಘಟನೆ ಇಂದು ಸಂಜೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ಸಂಜೆ 4.30ರ ವೇಳೆಗೆ ವಿದ್ಯಾರಣ್ಯಪುರಂನ ಜನನಿಬಿಡ ಪ್ರದೇಶದಲ್ಲಿರುವ ಅಮೃತ್ ಗೋಲ್ಡ್ ಜುವೆಲರ್ಸ ಅಂಗಡಿಗೆ ಬೈಕ್ನಲ್ಲಿ ಬಂದು ಏಕಾಏಕಿ ನುಗ್ಗಿದ ನಾಲ್ವರು ದುಷ್ಕರ್ಮಿಗಳು, ಅಂಗಡಿಯ ಬಾಗಿಲು ಮುಚ್ಚಿ ಮಾಲೀಕ ಧರ್ಮೇಂದ್ರರಿಗೆ ಪಿಸ್ತೂಲು ತೋರಿಸಿದ್ದಾರೆ. ಅವರು ಪ್ರತಿರೋಧ ತೋರಿದಾಗ, ಗುಂಡು ಹಾರಿಸಿ, ಗಾಯಗೊಳಿಸಿದ್ದಾರಲ್ಲದೆ, ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ಗಳನ್ನು ದೋಚುತ್ತಿದ್ದರು. ಆ ವೇಳೆಗೆ ಅಲ್ಲಿಗೆ ಬಂದ ಧರ್ಮೇಂದ್ರ ರ ಸಂಬAಧಿ ಶರತ್ ಚಂದ್ರ ಅವರು, ಅಂಗಡಿಯ ಬಾಗಿಲು ಅರೆ ಬರೆ ಮುಚ್ಚಿರುವುದನ್ನು ನೋಡಿ, ಅನುಮಾನಗೊಂಡು, ಬಾಗಿಲನ್ನು ಮೇಲೆತ್ತಿದ್ದಾಗ ದರೋಡೆ ನಡೆಯುತ್ತಿರುವುದನ್ನು ನೋಡಿ ಗಾಬರಿಗೊಂಡರು. ಜೋರಾಗಿ ಕೂಗಿಕೊಂಡಾಗ, ಗಾಬರಿಗೊಂಡು ದರೋಡೆ ಕೋರರು ಪಿಸ್ತೂಲ್ ತೋರಿಸಿ ಸುಮ್ಮನಿರುವಂತೆ ಬೆದರಿಕೆ ಹಾಕಿದರು. ಇದಕ್ಕೆ ಶರತ್ ಚಂದ್ರ ಪ್ರತಿರೋಧ ವ್ಯಕ್ತಪಡಿಸಿದರು. ಆಗ ಅಲ್ಲಿಗೆ ಬಂದ ದಡದಳ್ಳಿಯ ಚಂದ್ರ ಎಂಬಾತನನ್ನು ನೋಡಿದ ದರೋಡೆಕೋರರು ಜನ ಸೇರಿದರೆ ಸಿಕ್ಕಿ ಬೀಳುವ ಭೀತಿಯಿಂದ ಚಿನ್ನಾಭರಣ ದೊಂದಿಗೆ ಪರಾರಿಯಾಗಲು ಯತ್ನಿಸಿ, ತಮ್ಮ ದಾರಿಗೆ ಅಡ್ಡವಾಗಿದ್ದ ಶರತ್ ಚಂದ್ರ ರತ್ತ ಗುಂಡು ಹಾರಿಸಿದ್ದಾರೆ, ಆದರೆ ಅದು ಗುರಿ ತಪ್ಪಿ, ಅಲ್ಲಿದ್ದ ದಡದ ಹಳ್ಳಿಯ ಚಂದ್ರು (23) ಎಂಬಾತನ ಹಣೆಗೆ ನೇರವಾಗಿ ಹೊಕ್ಕಿದ್ದು, ಚಂದ್ರು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ದರೋಡೆ ಕೋರರು, ದೋಚಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಶೋಧಕಾರ ನಡೆಸಿದರು. ಜನ ನಿಬಿಡ ಪ್ರದೇಶದಲ್ಲಿ ಯೇ ಹಾಡಹಗಲೇ ಈ ರೀತಿಯ ದರೋಡೆ ನಡೆದಿರುವ ವಿಷಯ ತಿಳಿದ ಜನರು ಸ್ಥಳದಲ್ಲಿ ಜಮಾಯಿಸಿ, ಆತಂಕ ವ್ಯಕ್ತಪಡಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ನಡೆಸಿದರು. ದರೋಡೆ ಕೋರರ ಸುಳಿವು ಪತ್ತೆ ಹಚ್ಚಲು ಪೊಲೀಸರು ಸ್ಥಳದಲ್ಲಿ ಸಿಸಿಟಿವಿ ಯನ್ನು ಯಾರಾದರೂ ಅಳವಡಿಸಿ ರುವರೇ ಎಂದು ಪರಿಶೀಲನೆ ಮಾಡಿದಾಗ, ದರೋಡೆ ಗೆ ಒಳಗಾದ ಅಂಗಡಿ ಮಾಲೀಕನೂ ತನ್ನ ಅಂಗಡಿಗೆ ಸಿಸಿಟಿವಿ ಅಳವಡಿಸಿರಲಿಲ್ಲ. ಇದನ್ನೆಲ್ಲ ಗಮನಿಸಿ ಯೇ ದರೋಡೆ ಕೋರರು ಹಾಡ ಹಾಗಲೇ ಅಂಗಡಿ ಗೆ ನುಗ್ಗಿ ದರೋಡೆ ನಡೆಸಿದ್ದಾರೆ. ದರೋಡೆ ಕೋರರಿಗಾಗಿ ಪೊಲೀಸರು ಸುತ್ತ ಮುತ್ತಲಿನ ಪ್ರದೇಶದಲ್ಲಿ ನಾಕ ಬಂಧಿ ಹಾಕಿ ಶೋಧಕಾರ್ಯ ನಡೆಸಿದರು. ದರೋಡೆ ಬಗ್ಗೆ ವಿದ್ಯಾರಣ್ಯಪುರಂ ಠಾಣೆ ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ನಾವು ಘಟನೆಯ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ದರೋಡೆಕೋರರನ್ನು ಬಂಧಿಸುತ್ತೇವೆ ಎಂದು ತಿಳಿಸಿದರು.