Thursday, August 18, 2022

Latest Posts

ನ್ಯಾಕ್ ನೀಡುವ ಗ್ರೇಡ್‌ನಲ್ಲಿ ‘A+’ ನಿಂದ ‘A’ ಗೆ ಇಳಿದ ಮೈಸೂರು ವಿಶ್ವವಿದ್ಯಾನಿಲಯ

ಹೊಸದಿಗಂತ ವರದಿ, ಮೈಸೂರು:

ರಾಷ್ಟ್ರೀಯ  ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (NAAC) ನೀಡುವ ಗ್ರೇಡ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು A+’ ನಿಂದ ‘A’ ಗೆ ಇಳಿದಿದೆ. ಬೋಧಕರ ಕೊರತೆ ಹಾಗೂ ಸಂಶೋಧನೆ ಕೊರತೆಯಿಂದಾಗಿ ಈ ಕುಸಿತ ಕಂಡಿದೆ.
ಮೈಸೂರು ವಿಶ್ವವಿದ್ಯಾಲಯವು ರಾಷ್ಟಿçÃಯ ವೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್‌ನ (ನ್ಯಾಷನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡೆಸನ್ ಕೌನ್ಸಿಲ್-ನ್ಯಾಕ್) 4ನೇ ಆವೃತ್ತಿಯಲ್ಲಿ `A’ ಗ್ರೇಡ್ ಪಡೆದಿದ್ದು, ಮುಂದಿನ ಐದು ವರ್ಷದವರೆಗೆ ಈ ಮಾನ್ಯತೆ ಇರುತ್ತದೆ.
ಸೆ.15 ರಂದು 7 ಜನರ ನ್ಯಾಕ್ ತಂಡ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಎರಡು ದಿನ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿತ್ತು. 2014 ರಿಂದ 2019 ರವರೆಗೆ ನೀಡಿದ ಡೇಟಾವನ್ನೇ ನ್ಯಾಕ್ ಕಮಿಟಿ ಪರಿಗಣಿಸಿತ್ತು. ಒಟ್ಟು ಸಾವಿರ ಅಂಕದಲ್ಲಿ 700 ಅಂಕ ಮೈಸೂರು ವಿವಿ ಸಲ್ಲಿಸಿದ ಡೇಟಾಗಳಿಗೂ ಹಾಗೂ 300 ಅಂಕಗಳು ನ್ಯಾಕ್ ತಂಡದ ಪರಿಶೀಲನೆ ಬಳಿಕ ನೀಡಬೇಕಾಗಿತ್ತು. ಇದರಲ್ಲಿ ಮೈಸೂರು ವಿವಿಗೆ 301 ಅಂಕಗಳು ಅಂದ್ರೆ ಶೇ.75.05 ರಷ್ಟು ಅಂಕ ಪಡೆದು `A’ ಗ್ರೇಡ್ ಪಡೆದುಕೊಂಡಿದೆ.
ನ್ಯಾಕ್ ಸಮಿತಿ ಪರಿಗಣಿಸುವ ಬಹುತೇಕ ಎಲ್ಲಾ ವಿಭಾಗಗಳಲ್ಲೂ ಮೈಸೂರು ವಿವಿ ಉತ್ತಮ ಸಾಧನೆಯನ್ನೇ ಮಾಡಿದೆ. ಮಾನವ ಸಂಪನ್ಮೂಲಕ್ಕೆ ಸಂಬAಧಿಸಿದAತೆ ನಿಗಧಿತ ಟಾರ್ಗೆಟ್ ಮುಟ್ಟುವಲ್ಲಿ ವಿಫಲವಾದ ಕಾರಣ, ಅಂಕಗಳನ್ನು ನೀಡಲಾಗಿಲ್ಲ. ಕಳೆದ 12 ವರ್ಷಗಳಿಂದ ಅಂದ್ರೆ 2007 ರಿಂದಲೂ ಮೈಸೂರು ವಿವಿಗೆ ಖಾಯಂ ಸಿಬ್ಬಂದಿಗಳ ನೇಮಕಾತಿ ನಡೆದಿಲ್ಲ. ಪರಿಣಾಮ ಯುಜಿಸಿ ನಿಗಧಿ ಪಡಿಸಿದ ಗೈಡ್ ಲೈನ್ ಗಳ ಗುರಿಮುಟ್ಟುವಲ್ಲಿ ವಿವಿ ವಿಫಲವಾಗಿದೆ. ಇದು ಈಗ ನ್ಯಾಕ್ ಮಾನ್ಯತೆ ಮೇಲೆ ನೇರ ಪರಿಣಾಮ ಬೀರಿದೆ.
ಈ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪ್ರತಿಕ್ರಿಯಿಸಿ, ಕಾಯಂ ಪ್ರಾಧ್ಯಾಪಕರ ಸಂಖ್ಯೆ ಕಡಿಮೆ ಇದ್ದ ಕಾರಣ ನ್ಯಾಕ್‌ನಲ್ಲಿ ಎ ಗ್ರೇಡ್ ಸಿಕ್ಕಿದೆ. 15 ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕ ಇರಬೇಕು ಎಂಬುದು ಯುಜಿಸಿ ನಿಯಮ. ಆದರೆ, ನಮ್ಮಲ್ಲಿ 25 ಮಕ್ಕಳಿಗೆ ಒಬ್ಬ ಪ್ರಾಧ್ಯಾಪಕರಿದ್ದಾರೆ. ಹಾಗಾಗಿ ಮಾನವ ಸಂಪನ್ಯೂಲ ಕೊರತೆಯಿಂದ ಸ್ವಲ್ಪ ಹಿನ್ನಡೆ ಆಗಿ ಹೆಚ್ಚಿನ ಅಂಕ ಸಿಕ್ಕಿಲ್ಲ. ಆದರೆ, ಉಳಿದ ವಿಭಾಗದಲ್ಲಿ ಒಳ್ಳೆಯ ಅಂಕ ಪಡೆದಿದ್ದೇವೆ. ಮೈಸೂರು ವಿವಿ ಬಗ್ಗೆ ನ್ಯಾಕ್ ತಂಡಕ್ಕೂ ಒಳ್ಳೆಯ ಅಭಿಪ್ರಾಯ ಇತ್ತು ಎಂದು ಹೇಳಿದರು.
ಅತ್ಯುತ್ತಮ ಸೌಲಭ್ಯಗಳಿರುವುದರಿಂದ A+ ಶ್ರೇಯಾಂಕ ಉಳಿಸಿಕೊಳ್ಳುವ ಭರವಸೆಯಿತ್ತು. ಆದರೆ, ಬೋಧಕರ ಕೊರತೆ ಹಾಗೂ ಸಂಶೋಧನೆ ಪ್ರಮಾಣ ತಗ್ಗಿದ್ದರಿಂದ ಅಂಕಗಳು ಕಡಿಮೆಯಾಗಿವೆ. ಹೀಗಾಗಿ ‘A’ ಮಾನ್ಯತೆ ದೊರಕಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಮಾತನಾಡಿ, 400 ಬೋಧಕರ ಕೊರತೆ ಇರುವುದರಿಂದ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳುತ್ತಿರುವುದಾಗಿ ನ್ಯಾಕ್ ಸಮಿತಿಗೆ ತಿಳಿಸಿದ್ದೆವು. ಮಾನ್ಯತೆಯು ಐದು ವರ್ಷಗಳ ಅವಧಿಗೆ ಇರಲಿದ್ದು, ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿAಗ್ ಫ್ರೇಮವರ್ಕ್ ನ(ಎನ್‌ಐಆರ್ ಎಫ್) ಶ್ರೇಯಾಂಕ ಪಟ್ಟಿಯ ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ 19 ನೇ ಸ್ಥಾನ ಸಿಕ್ಕಿದೆ. ಈ ಮೂಲಕ ಹಿಂದಿನ ಬಾರಿಗಿಂತ 8 ಸ್ಥಾನ ಮೇಲೇರಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!