ಚಿಲಿ ದೇಶದಲ್ಲೊಂದು ನಿಗೂಢ ವಿಸ್ಮಯ: ನಿರ್ಜನ ಭೂ ಪ್ರದೇಶದಲ್ಲಿ ಪತ್ತೆಯಾಯ್ತು ಬೃಹತ್‌ ಗಾತ್ರದ ಕುಳಿ!

ಹೊಸದಿಂತ ಡಿಜಿಟಲ್‌ ಡೆಸ್ಕ್‌ 
ಭೂಮಿಯಲ್ಲಿ ಆಗಾಗ್ಯೆ ಹಲವಾರು ನಿಗೂಢ ವಿಸ್ಮಯ ವಿಚಾರಗಳು ಪತ್ತೆಯಾಗಿ ಜನರ ಗಮನ ಸೆಳೆಯುತ್ತಿರುತ್ತವೆ. ಕಳೆದ ವಾರ ಚಿಲಿ ದೇಶದದಲ್ಲಿ ಇಂತಹದ್ದೇ ಒಂದು ವಿಸ್ಮಯ ನಡೆದಿದ್ದು, ಅಲ್ಲಿನ ನಿರ್ಜನ ಭೂ ಪ್ರದೇಶವೊಂದರಲ್ಲಿ ಬೃಹತ್‌ ಗಾತ್ರದ ಕುಳಿಯೊಂದು ಪತ್ತೆಯಾಗಿ ವಿಶ್ವಾದ್ಯಂತ ಭೂವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದೆ.
ಚಿಲಿ ದೇಶದ ಸಿಂಕ್ಹೋಲ್ ಗಣಿಗಾರಿಕೆ ಪಟ್ಟಣವಾದ ಟಿಯೆರಾ ಅಮರಿಲ್ಲಾ ಎಂಬ ಭೂ ಪ್ರದೇಶದಲ್ಲಿ ಸುಮಾರು 82 ಅಡಿ ಅಗಲ ಹಾಗೂ 656 ಅಡಿಗಳಷ್ಟು ಆಳವಿರುವ ಬೃಹತ್ ಕುಳಿ ಪತ್ತೆಯಾಗಿದೆ. ಈ ಕುಳಿ ಇಷ್ಟು ದಿನ ಜನರ ಕಣ್ಣಿಂದ ಮರೆಯಾಗಿದ್ದು ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ಕುಳಿ ರೂಪುಗೊಂಡಿದ್ದು ಹೇಗೆ ಎಂಬುದರ ಕುರಿತು ಚಿಲಿ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ.

ಹೆಚ್ಚಿನ ವಿಪತ್ತು ತಡೆಗಟ್ಟುವ ಕ್ರಮವಾಗಿ, ನಿಗೂಢ ಕುಳಿ ಪತ್ತೆಯಾಗಿರುವ ಸ್ಥಳಕ್ಕೆ ಸಮೀಪದ ಪ್ರದೇಶವಾದ ಅಲ್ಕಾಪರ್ರೋಸಾ ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿಲಿಯು ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದಕ ದೇಶವಾಗಿದ್ದು, ಜಾಗತಿಕ ಪೂರೈಕೆಯ ಕಾಲು ಭಾಗದಷ್ಟನ್ನು ಪೂರೈಸುತ್ತಿದೆ.
“ಕುಳಿಯು ಸರಿಸುಮಾರು 200 ಮೀಟರ್‌ಗಳು (656 ಅಡಿಗಳು)ಗಳಷ್ಟು ಕೆಳಕ್ಕೆ ತಳವನ್ನು ಹೊಂದಿದೆ. ನಾವು ಅಲ್ಲಿ ಯಾವುದೇ ವಸ್ತುವನ್ನು ಪತ್ತೆ ಮಾಡಿಲ್ಲ, ಆದರೆ ಅದರೊಳಗೆ ಸಾಕಷ್ಟು ನೀರು ಇರುವುದನ್ನು ಗಮನಿಸಿದ್ದೇವೆ,” ಎಂದು ರಾಷ್ಟ್ರೀಯ ಭೂವಿಜ್ಞಾನ ಮತ್ತು ಗಣಿಗಾರಿಕೆಯ ಇಲಾಖೆಯ ನಿರ್ದೇಶಕ ಡೇವಿಡ್ ಮಾಂಟೆನೆಗ್ರೊ ತಿಳಿಸಿದ್ದಾರೆ.
ಬ್ಲಾಕ್‌ ಹೋಲ್‌ ಪತ್ತೆಯಾದ ಪ್ರದೇಶ ಹೊತ್ತಿರದ  ಜನನಿಬಿಡ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಚಿಲಿ ಸರ್ಕಾರದ ತನಿಖೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಹೊರಬೀಳಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!