Wednesday, August 10, 2022

Latest Posts

ಅಮೀರ್ ಖಾನ್ ಜೊತೆಗೆ ನಾಗಚೈತನ್ಯ ಪಾರ್ಟಿ: ಸಮಂತಾ ಅಕ್ಕಿನೇನಿ ಮಿಸ್ಸಿಂಗ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹಲವು ದಿನಗಳಿಂದ ನಟಿ ಸಮಂತಾ ಅಕ್ಕಿನೇನಿ ಹಾಗೂ ನಾಗಚೈತನ್ಯ ನಡುವೆ ಸಂಬಂಧ ಸರಿ ಇಲ್ಲ ಎನ್ನು ಮಾತಿಗೆ ಸಾಕ್ಷಿಯಂತೆ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
ನಾಗಚೈತನ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಸಮಂತಾ ಗೈರಾಗಿದ್ದು, ಮಾವ ನಾಗಾರ್ಜುನ ಹುಟುಹಬ್ಬದ ದಿನವೂ ಸಮಂತಾ ಇರಲಿಲ್ಲ.
ಅಷ್ಟೇ ಅಲ್ಲ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಾಗಚೈತ್ಯ ಹಾಗೂ ಸಮಂತಾ ಒಟ್ಟಾಗಿರುವ ಫೋಟೋ ಹಂಚಿಕೊಂಡಿಲ್ಲ. ಯಾವಾಗಲೂ ಸಿಂಗಲ್ ಆಗಿಯೇ ಟ್ರಾವೆಲ್ ಮಾಡುತ್ತಿರೋದು ಎಲ್ಲರಿಗೂ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಇತ್ತೀಚೆಗೆ ಅಮೀರ್ ಖಾನ್ ಜೊತೆಗೆ ಲಾಲ್ ಸಿಂಗ್ ಛಡ್ಡಾ ಸಿನಿಮದಲ್ಲಿ ನಾಗಚೈತನ್ಯ ನಟಿಸಿದ್ದು,  ಈ ಹಿನ್ನೆಲೆ ನಟಿ ಸಾಯಿ ಪಲ್ಲವಿ, ಅಮೀರ್ ಖಾನ್ ಸೇರಿದಂತೆ ಸಿನಿಮಾ ತಂಡ ಪಾರ್ಟಿ ಹೋಸ್ಟ್ ಮಾಡಿತ್ತು. ಆದರೆ ಈ ದಿನವೂ ಸಮಂತಾ ಮಿಸ್ ಮಾಡಿದ್ದು, ಎಲ್ಲೆಡೆ ಸಮಂತಾ ಅನುಪಸ್ಥಿತಿ ಕಾಣುತ್ತಿರೋದು ನೆಟ್ಟಿಗರಲ್ಲಿ ಬೇಸರ ತಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss