ಕಾಂಗ್ರೆಸ್‌ ಅಧಿನಾಯಕಿ ವಿರುದ್ಧ ನಗ್ಮಾ ಕೆಂಡಾಮಂಡಲ: ನನ್ನ 18 ವರ್ಷದ ತಪಸ್ಸು ವ್ಯರ್ಥ ಎಂದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಸಿನಿಮಾ ನಟಿ ನಗ್ಮಾ ಸೋನಿಯಾ ಗಾಂಧಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ರಾಜ್ಯಸಭಾ ಸ್ಥಾನಗಳ ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. 18 ವರ್ಷಗಳ ಹಿಂದೆ ನಾನು ಪಕ್ಷಕ್ಕೆ ಸೇರಿದಾಗ ಸೋನಿಯಾ ಗಾಂಧಿ ಅವರು ರಾಜ್ಯಸಭೆಯಲ್ಲಿ ನನಗೆ ಅವಕಾಶ ನೀಡುವುದಾಗಿ ಹೇಳಿದ್ದರು. ಆ ಅವಕಾಶ ಇಲ್ಲಿಯವರೆಗೆ ಬಂದಿಲ್ಲವಾ..? ಎಂದು ಪ್ರಶ್ನೆ ಮಾಡಿದಾರೆ. ಮುಂದಿನ ತಿಂಗಳು 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಹತ್ತು ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಗೆ ಕೆಲ ಹಿರಿಯ ನಾಯಕರು ಅತೃಪ್ತರಾಗಿದ್ದಾರೆ. ರಾಜ್ಯಸಭಾ ಸ್ಥಾನಕ್ಕಾಗಿ ಹತಾಶೆಗೊಂಡಿರುವ ಪಕ್ಷದ ವಕ್ತಾರ ಪವನ್ ಖೇರಾ ಅವರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ಮುಂಬೈ ಘಟಕದ ಉಪಾಧ್ಯಕ್ಷೆ ಚಿತ್ರನಟಿ ನಗ್ಮಾ ಕೂಡ ರಾಜ್ಯಸಭೆಯಲ್ಲಿ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಪವನ್ ಖೇರಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಗ್ಮಾ, ‘ಇಮ್ರಾನ್ ಭಾಯ್ ಎದುರು ನನ್ನ 18 ವರ್ಷದ ತಪಸ್ಸು ಏನೇನೂ ಅಲ್ಲ’ ಎಂದಿದ್ದಾರೆ.

2003-04ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನನ್ನನ್ನು ರಾಜ್ಯಸಭೆಗೆ ಕಳುಹಿಸುವುದಾಗಿ ಹೇಳಿದ್ದರು. ಅಂದಿನಿಂದ ಇಲ್ಲಿವರೆಗೆ 18 ವರ್ಷಗಳಲ್ಲಿ ಅವರು ನನಗೆ ಒಂದೇ ಒಂದು ಅವಕಾಶವನ್ನು ನೀಡಿಲ್ಲ. ಇದೀಗ ಇಮ್ರಾನ್ ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದಾರೆ. ನಾನು ಆ ಸ್ಥಾನಕ್ಕೆ ಅರ್ಹಳಲ್ಲವೇ? ಎಂದು ನಗ್ಮಾ ಸೋನಿಯಾ ಗಾಂಧಿಯನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!