Sunday, April 11, 2021

Latest Posts

ಯುವತಿಯ ನಗ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿ ಬಂಧನ

ಹೊಸದಿಗಂತ ವರದಿ, ವಿಜಯಪುರ:

ನಗರದ ಯುವತಿಯೊಬ್ಬಳನ್ನು ಪ್ರೀತಿಸುವಂತೆ ನಟಿಸಿ, ಯುವತಿಯಿಂದ ನಗ್ನ ಫೋಟೋಗಳನ್ನು ಪಡೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯೊಬ್ಬನನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಘಾಜಿಯಾಬಾದದ ರಾಜೇಂದ್ರ ಸಿಂಗ್ ಜೀವನ ಸಿಂಗ್ ಬಿಸ್ಟ್ (21) ಬಂಧಿತ ಆರೋಪಿ.
ರಾಜೇಂದ್ರ ಸಿಂಗ್ ಬಿಸ್ಟ್ ಈತನು ನಗರದ ಯುವತಿಯೊಬ್ಬಳನ್ನು ಪ್ರೀತಿಸುವಂತೆ ನಟನೆ ಮಾಡಿ, ಯುವತಿಯಿಂದ ನಗ್ನ ಫೋಟೋ ಹಾಗೂ ಜಿಮೇಲ್ ಅಕೌಂಟ್ ಅನ್ನು ಪಡೆದುಕೊಂಡು, ಜಿಮೇಲ್‌ನಲ್ಲಿರುವ ಸ್ಥಳೀಯರ ಫೋನ್ ನಂಬರ್‌ನ ವಾಟ್ಸಾಪ್ ಗ್ರೂಪ್ ಹಾಗೂ ಇನ್ಸ್ಟಾಗ್ರಾಮ್‌ಗೆ ಹರಿ ಬಿಟ್ಟಿರುವ ಕುರಿತು ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗೆ ಮುಂದಾದ ಪೊಲೀಸ್ ಅಧಿಕಾರಿಗಳ ವಿಶೇಷ ತಂಡ, ಉತ್ತರ ಪ್ರದೇಶ ಘಾಜಿಯಾಬಾದಿಂದ ಆರೋಪಿಯನ್ನು ಬಂಧಿಸಿ ತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss